ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಭಾರತೀಯ ಭಾಷಾ ಬೇಸಿಗೆ ಶಿಬಿರ ಏರ್ಪಡಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯ ಮತ್ತು ಉಲ್ಲೇಖದನ್ವಯ ರಾಜ್ಯದ ಶಾಲೆಗಳಲ್ಲಿ ಭಾರತೀಯ ಭಾಷಾ ಬೇಸಿಗೆ ಶಿಬಿರವನ್ನು ಏರ್ವಡಿಸಬೇಕಿದ್ದು, ಈ ಸಂಬಂಧ ನಿಯಮಾನುಸಾರ ಅಗತ್ಯ ಕ್ರಿಯಾಯೋಜನೆಯನ್ನು ರೂಪಿಸಿಕೊಂಡು ಸದರಿ ಕಾರ್ಯಕ್ರಮವನ್ನು ಏರ್ಪಡಿಸುವ ಸಲುವಾಗಿ ಪ್ರತಿ ಟಯಟ್ ನಿಂದ ಒಬ್ಬರು ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಿಸುವುದು, ಪತ್ರಿ ಶಾಲೆಗಳಲ್ಲಿ ಒಬ್ಬರು ನೋಡಲ್ ಶಿಕ್ಷಕರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ನಡೆಸಲು ಅಗತ್ಯ ಕಮವಹಿಸುವುದು.
ದಿನಾಂಕ 19-05-2025 ರಂದು ಸದರಿ ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರಮಟ್ಟದಲ್ಲಿ Virtual Mode ನಲ್ಲಿ ನಡೆಸಲಿದ್ದು, ಸೂಕ್ತ ಸಿದ್ಧತೆಯನ್ನು ಮಾಡಿಕೊಂಡು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಮತ್ತು ಡಯಟ್ ನೋಡಲ್ ಅಧಿಕಾರಿಗಳು online Regisrtation ಮಾಡಿಕೊಳ್ಳುವ ಮೂಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ರಾಜ್ಯದಲ್ಲಿ ಸದರಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಲು ಅಗತ್ಯ ಕ್ರಮವಹಿಸಲು ತಿಳಿಸಿದೆ.
ಉಲ್ಲೇಖ-1ರ ಪತ್ರದಲ್ಲಿ ಸೂಚಿಸಿರುವಂತೆ 07 ದಿನಗಳ ಭಾರತೀಯ ಭಾಷಾ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಆಯೋಜಿಸಿಸಬೇಕಾಗಿರುವ ಚಟುವಟಿಕೆಗಳನ್ನು ಒದಗಿಸಿರುತ್ತಾರೆ.ಅದರಂತೆ ಶಾಲಾ ಹಂತದಲ್ಲಿ ಚಟುವಟಿಕೆಗಳನ್ನು ಆಯೋಜಿಸುವಂತೆ, ನಂತರ ನಿಗದಿತ ಗೂಗಲ್ ಟ್ರಾಕರ್ಗಳಲ್ಲಿ ಆಯಾ ದಿನದ ಚಟುವಟಿಕಟಗಳಿಗೆ ಸಂಬಂಧಿತ ಫೋಟೋ ಹಾಗೂ ವೀಡಿಯೋಗಳನ್ನು Upload ಮಾಡಲು ಕ್ರಮವಹಿಸುವುದು. ಕಾರ್ಯಕ್ರಮದ ನಂತರ ಡಯಟ್ ನೋಡಲ್ ಅಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಡಿ.ಎಸ್.ಇ.ಆರ್.ಟಿ.ಗೆ ವರದಿ ನೀಡುವುದು. ಉಲ್ಲೇಖಿತ ಪತ್ರಗಳನ್ನು ಮತ್ತು ಮಾರ್ಗಸೂಚಿಯನ್ನು ಸದರಿ ಪತ್ರದೊಂದಿಗೆ ಲಗತ್ತಿಸಿದೆ.