ಚಾಮರಾಜನಗರ : ರಾಜ್ಯದಲ್ಲಿ ಇಂದು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಾಲ್ಯ ವಿವಾಹ ಮತ್ತು ಬಾಲಕಿಯ ನಿಶ್ಚಿತಾರ್ಥವನ್ನು ಅಧಿಕಾರಿಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಚಾಮರಾಜನಗರದ ಎಪಿ ಮೊಹಲ್ಲಾದಲ್ಲಿ ಬಾಲ್ಯ ವಿವಾಹಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಬಾಲ್ಯ ವಿವಾಹವನ್ನು ತಡೆದಿದ್ದಾರೆ. ಬಳಿಕ ಪೋಷಕರಿಗೆ ಈ ಕುರಿತು ಅರಿವು ಮೂಡಿಸಿದರು.
ಇನ್ನು 2ನೇ ಪ್ರಕಾರಣವೂ ಚಾಮರಾಜನಗರ ತಾಲೂಕಿನ ಬಿಸಿಲವಾಡಿ ಗ್ರಾಮದಲ್ಲಿ ನಡೆದಿದ್ದು, ಯುವಕನ ಜೊತೆಗೆ ಬಾಲಕಿಗೆ ನಿಶ್ಚಿತಾರ್ಥ ನೆರವೇರಿಸುತ್ತಿದ್ದರು. ಬಾಲಕಿಗೆ ನಿಶ್ಚಿತಾರ್ಥದ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರಿ ಸಲ್ಲಿಕೆಯಾಗಿದೆ. ತಕ್ಷಣ ಅಧಿಕಾರಿಗಳು ದೂರನ್ನು ಆಧರಿಸಿ ಬಿಸಲವಾಡಿ ಗ್ರಾಮಕ್ಕೆ ಧಾವಿಸಿ ಬಾಲಕಿಯ ನಿಶ್ಚಿತಾರ್ಥಕ್ಕೆ ಬ್ರೇಕ್ ಹಾಕಿದ್ದಾರೆ.
ಅಲ್ಲದೇ ಅಲ್ಲಿದ್ದ ಎಲ್ಲರಿಗೂ ಸಹ ಬಾಲ್ಯ ವಿವಾಹದ ಕುರಿತು ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದ್ದಾರೆ. ಈ ವೇಳೆ ಎರಡು ಕಡೆ ಪೋಷಕರಿಂದ ಅಧಿಕಾರಿಗಳು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕ ಮಕ್ಕಳ ಪಕ್ಷಕ್ಕೆ ನೋಟಿಸ್ ನೀಡಿದೆ.