ತುಮಕೂರು : ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಹಿಟ್ ಅಂಡ್ ರಂಡಿಗೆ ಬೈಕ್ ಸಮಾರಂಭ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತಾವರೆಕೆರೆಯಲ್ಲಿ ನಡೆದಿದೆ.
ತಾವರೆಕೆರೆಯ ಬಳಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತಾವರೆಕೆರೆ ಎಂಬಲ್ಲಿ ಈ ಒಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದೆ. ತಾವರೆಕೆರೆ ಬಡಾವಣೆ ನಿವಾಸಿ ಸುರೇಶ್ (38) ಸಾವನಪ್ಪಿದ್ದಾನೆ. ಕೆಲಸಕ್ಕೆ ತೆರಳಿ ಮನೆಗೆ ವಾಪಸ್ ಆಗುವಾಗ ಈ ಒಂದು ದುರ್ಘಟನೆ ನಡೆದಿದೆ. ಅಪಘಾತದ ಕುರಿತು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.