ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಅವರು ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಿಡಿಒ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪಿಡಿಒ ಅಧಿಕಾರಿ ಮುಖದ ಮೇಲೆ ಅರ್ಜಿ ಎಸೆದು ಶಾಸಕ ಸಮೃದ್ಧಿ ಮಂಜುನಾಥ್ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಯಲೂರು ಜನಸ್ಪಂದನ ಕಾರ್ಯಕ್ರಮದಲ್ಲಿ ಪಿಡಿಒ ವಿರುದ್ಧ ಕೆಂಡಮಂಡಲ ಆಗಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ರೆಡ್ಡಿ ವಿರುದ್ಧ ಅವರು ಈ ರೀತಿ ಕಿಡಿಕಾರಿದ್ದಾರೆ. ಗ್ರಾಮಗಳಲ್ಲಿ ಸಮಸ್ಯೆಗಳ ಸರಮಾಲೆ ಕಂಡು ಬರುತ್ತಿದ್ದು ಪಿಡಿಒ ಏನು ಕೆಲಸ ಮಾಡುತ್ತಿಲ್ಲ ಎಂದು ದೂರು ಬಂದಿದೆ ಕೂಡಲೇ ಪಿಡಿಒ ಅಧಿಕಾರಿಯನ್ನು ಬದಲಾಯಿಸಬೇಕು ಎಂದು ದೂರುಗಳು ಬಂದಿವೆ.
ತಾಯಲೂರು ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ರೆಡ್ಡಿ ವಿರುದ್ಧ ಅಲ್ಲ 9 ಕೇಸ್ ನಿಮ್ಮದೇ ಬರುತ್ತಿದೆ.ನಿಮ್ಮ ವಿರುದ್ಧ ದೂರು ಕೊಡಲು ಅವರೇನು ಹುಚ್ಚರ? ನಿಮಗೆ ಇಷ್ಟ ಆದ್ರೆ ಕೆಲಸ ಮಾಡಿ ಇಲ್ಲ ಹೋಗ್ತಾ ಇರಿ. ಆ ದೇವಸ್ಥಾನದ ಸಮೀಪ ಮಟನ್ ಅಂಗಡಿ ಹಾಕಲಿಕ್ಕೆ ಹೇಗೆ ಪರಮಿಸನ್ ಕೊಟ್ಟೆ ? ಏನಕ್ಕಿದೆಯಾ ನೀನು? ಮಾತಾಡಿದ್ರೆ ವಾದಿಸುತ್ತಾನೆ. ನಿನಗೆ ಆಗುತ್ತಾ ಅಂ






