ದಕ್ಷಿಣಕನ್ನಡ : ದಕ್ಷಿಣಕನ್ನಡದಲ್ಲಿ ಅನ್ಯಕೋಮಿನ ಯುವಕನ ಜೊತೆಗೆ ಹಿಂದೂ ಯುವತಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಮೊಹಮ್ಮದ್ ಮಿದ್ಲಾಜ್ ಎಂಬಾತನ ಜೊತೆಗೆ ವೈಶಾಲಿ (23) ಪರಾರಿ ಆಗಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಸೂರತ್ಕಲ್ ನ ಕಾಲೇಜಿನಲ್ಲಿ ವೈಶಾಲಿ ಓದುತ್ತಿದ್ದಳು ಕಾಸರಗೋಡು ಆರ್ಡಿ ನಗರದ ಮೀಪುಗರಿ ನಿವಾಸಿಯಾಗಿರುವ ವೈಶಾಲಿ ಜನವರಿ 31 ರಂದು ಮಿದ್ಲಾಜ್ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾಳೆ. ಕೇರಳದ ವಯನಾಡು ನೋಂದಣಾಧಿಕಾರಿ ಕಚೇರಿಯಲ್ಲಿ ಇಬ್ಬರು ಮದುವೆಯಾಗಿದ್ದಾರೆ.
ವಿಷಯ ತಿಳಿದು ಪೋಷಕರು ಆಕೆ ಇದ್ದ ಬಿಜೆಪಿಗೆ ಬಂದು ವಿಚಾರಿಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಫೆಬ್ರವರಿ 9ರಂದು ಪಿಜಿಯಿಂದ ತೆರಳಿರುವ ದೃಶ್ಯ ಸೆರೆಯಾಗಿದೆ ಮಗಳು ಸಂಪರ್ಕಕ್ಕೆ ಸಿಗದೇ ಇದ್ದಿದ್ದರಿಂದ ಸೂರತ್ಕಲ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ವೈಶಾಲಿ ಪೋಷಕರ ದೂರು ಆಧರಿಸಿ ಸೂರತ್ಕಲ್ ಠಾಣೆಯಲ್ಲಿ FIR ದಾಖಲಾಗಿದೆ.








