ನವದೆಹಲಿ : ಇತ್ತೀಚೆಗೆ ಹೆಚ್ಚುತ್ತಿರುವ ಆನ್ ಲೈನ್ ವಂಚನೆಗಳನ್ನು ತಡೆಯಲು ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬ್ಯಾಂಕ್‌ಗಳಿಗೆ ಪ್ರತ್ಯೇಕ ಮತ್ತು ಸುರಕ್ಷಿತ ವಾದ ‘ಬ್ಯಾಂಕ್.ಇನ್’ ಡೊಮೈನ್ ರೂಪಿಸಿದೆ.
ಭಾರತದ ಎಲ್ಲಾ ಬ್ಯಾಂಕುಗಳು ಆನ್‌ಲೈನ್ ವಂಚನೆಗಳನ್ನು ತಡೆಯಲು ಮುಂದಿನ 6 ತಿಂಗಳಲ್ಲಿ .bank.in ಡೊಮೇನ್‌ಗೆ ಬದಲಾಗಲಿವೆ. ಎನ್‌ಐಎಕ್ಸ್‌ಐ ಸಿಇಒ ಈ ವಿಷಯ ತಿಳಿಸಿದ್ದಾರೆ.
ಭಾರತದಲ್ಲಿ ಸೈಬರ್ ವಂಚನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು (ಎಂಇಐಟಿವೈ) ಸಂಪರ್ಕಿಸಿ ಇದಕ್ಕೊಂದು ಪರಿಹಾರ ನೀಡುವಂತೆ ಕೇಳಿಕೊಂಡಿತ್ತು. ಇದರ ಪರಿಣಾಮವಾಗಿ, ಎಲ್ಲಾ ಭಾರತೀಯ ಬ್ಯಾಂಕುಗಳಿಗೆ .bank.in ಎಂಬ ಹೊಸ ಡೊಮೇನ್ ಅನ್ನು ರಚಿಸಲು ಮತ್ತು ಇದನ್ನೇ ಬಳಸಲು ನಿರ್ಧರಿಸಲಾಗಿದೆ.
ಹೆಚ್ಚುತ್ತಿರುವ ಸೈಬರ್‌ವಂಚನೆಗಳನ್ನು ತಡೆಯಲು ಪರಿಹಾರ ರೂಪಿಸುವಂತೆ ಆರ್‌ಬಿಐ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಸಂಪರ್ಕಿ ಸಿತ್ತು. ಈ ನಿಟ್ಟಿನಲ್ಲಿ ಎಲ್ಲ ಬ್ಯಾಂಕ್‌ಗಳಿಗಾಗಿ ಬ್ಯಾಂಕ್. ಇನ್’ ಡೊಮೈನ್ ರೂಪಿಸಲು ಮತ್ತು ಜಾರಿಗೆ ಸರಕಾರ ಮುಂದಾಗಿದೆ. ಡೊಮೈನ್ ಮಟ್ಟದ ಭದ್ರತೆಯನ್ನು ಬಲಪಡಿಸಲು, ತನ್ನ ರಿಜಿಸ್ಟ್ರಾರ್ ಮಾನ್ಯತೆ ಒಪ್ಪಂದವನ್ನು ಎನ್‌ಐಎಕ್ಸ್‌ಐ ತಿದ್ದುಪಡಿ ಮಾಡಿದೆ. ಆದರೂ ಅದರ ಅನುಷ್ಠಾನ ಇನ್ನೂ ನಡೆಯುತ್ತಿದೆ. “ನಾವು ಡಾಟ್‌ಇನ್ ಡೊಮೈನ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ಬಯಸಿದರೆ, ನಮ್ಮದೇ ಆದ ನೀತಿಗಳನ್ನು ರಚಿಸಬೇಕು ಮತ್ತು ಜಾರಿಗೊಳಿಸಬೇಕು”ಎಂದು ತ್ಯಾಗಿ ತಿಳಿಸಿದ್ದಾರೆ.