*ಅವಿನಾಶ್ ಆರ್ ಭೀಮಸಂದ್ರ ಜೊತೆಗೆ ವಸಂತ್ ಬಿ ಈಶ್ವರಗೆರೆ
ಬೆಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2022) ದಿನಾಂಕ: 06-11-2022ರ ಭಾನುವಾರದಂದು ರಾಜ್ಯದಾದ್ಯಂತ ಎರಡು ಅಧಿವೇಶನಗಳಲ್ಲಿ (ಪತ್ರಿಕೆ-1 ಮೊದಲ ಅಧಿವೇಶನ ಮತ್ತು ಪತ್ರಿಕೆ-2 ಮಧ್ಯಾಹ್ನದ ಅಧಿವೇಶನ) ನಡೆಯಲಿದ್ದು, ಅಧಿಸೂಚನೆಯಂತೆ ನಿಗದಿತ ಶುಲ್ಕ ಪಾವತಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ದಿನಾಂಕ: 25-10-2022 ರಿಂದ ತಮ್ಮ ಪ್ರವೇಶ ಪತ್ರವನ್ನು ಇಲಾಖಾ ವೆಬ್ಸೈಟ್ https://schooleducation.kar.nic.in ನಲ್ಲಿ ಲಭ್ಯವಿರಿಸಿದೆ.
ಅಭ್ಯರ್ಥಿಗಳು ತಮ್ಮ User Id ಮತ್ತು Password ಅನ್ನು ನಮೂದಿಸಿ download ಮಾಡಿಕೊಳ್ಳಲು ತಿಳಿಸಿದೆ. KARTET-2022ರ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನೀಡಲಾದ ಸೂಚನೆಗಳನ್ನು ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಸೂಚನಾ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು, ಕೂಲಂಕಷವಾಗಿ ಓದಿ ಅರ್ಥೈಸಿಕೊಂಡು, ಅದರಂತೆ ಸಿದ್ಧತೆಯೊಂದಿಗೆ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಿದೆ. ಆಯಾ ಜಿಲ್ಲೆಯ ಪರೀಕ್ಷಾ ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನೊಳಗೊಂಡ ಪಟ್ಟಿಯನ್ನೂ ಸಹ ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಕರ್ನಾಟಕ ಶಿಕ್ಷಕರ ಅರ್ಹತಾ (KARTET-2022) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸೂಚನೆಗಳು
* ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ಪ್ರತಿ ಅಧಿವೇಶನದ ಪರೀಕ್ಷಾ ಪ್ರಾರಂಭದ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಹಾಜರಿರುವುದು.
* ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಲಾಗುವುದು. ಎಲ್ಲಾ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಲಾಗುವುದು.
* ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳ ಮೊದಲು ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶವನ್ನು ನೀಡಲಾಗುವುದು. ಪರೀಕ್ಷೆ ಪ್ರಾರಂಭವಾದ (ಬೆಳಗ್ಗೆ 9.30, ಮಧ್ಯಾಹ್ನ 2.00 ಗಂಟೆಗೆ) ನಂತರ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ.
* ಒಮ್ಮೆ ಅಭ್ಯರ್ಥಿಯು ಪರೀಕ್ಷಾ ಕೊಠಡಿ ಪ್ರವೇಶಿಸಿದ ನಂತರ ಪರೀಕ್ಷೆ ಮುಗಿಯುವವರೆವಿಗೂ ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಲು ಅವಕಾಶವಿರುವುದಿಲ್ಲ.
* ಈ ಕೆಳಗೆ ನೀಡಿರುವ ವೇಳಾಪಟ್ಟಿಯಲ್ಲಿ ನಮೂದಿಸಿರುವ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಗೌಪ್ಯತಾ ದೃಷ್ಠಿಯಿಂದ ಅಭ್ಯರ್ಥಿಗಳು ತಪಾಸಣೆಗೆ ಒಳಪಡಬೇಕಾಗಿರುವುದರಿಂದ ಪರೀಕ್ಷೆ ಪ್ರಾರಂಭವಾಗುವುದಕ್ಕೆ ಅರ್ಧಗಂಟೆ ಮುಂಚೆ ಪರೀಕ್ಷಾ ಕೇಂದ್ರದ ಪ್ರವೇಶದ ಬಾಗಿಲನ್ನು ಮುಚ್ಚಲಾಗುವುದು.
ಪೂರ್ವಮುದ್ರಿತ ಓ.ಎಮ್.ಆರ್ ಸಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಗಳ ವಿತರಣೆ ಮತ್ತು ನಾಮಯಾದಿ ಪಟ್ಟಿಯಲ್ಲಿ ಸಹಿ ಪಡೆಯುವುದು ಪರೀಕ್ಷಾ ದಿನಾಂಕ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಪ್ರವೇಶಿಸುವುದು. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವುದು ಮತ್ತು ಪ್ರವೇಶ ಪತ್ರವನ್ನು ಪರಿಶೀಲನೆಗೆ ಒಳಪಡಿಸುವುದು.
ಅಭ್ಯರ್ಥಿಯು ತನ್ನ ಅರ್ಜಿ ಸಂಖ್ಯೆಯನ್ನು ಪೂರ್ವ ಮುದ್ರಿತ ಓ.ಎಮ್.ಆರ್ ನ ನಿಗದಿತ ಚೌಕದಲ್ಲಿ ಬರೆದು ಮತ್ತು ಉದಾಹರಣೆಯಲ್ಲಿ ಸೂಚಿಸಿರುವ ವಿಧಾನದಂತೆ ಶೇಡ್ ಮಾಡುವುದು.
ಉತ್ತರ ಪತ್ರಿಕೆಗಳನ್ನೊಳಗೊಂಡ ಪರೀಕ್ಷಾ ಪುಸ್ತಕಗಳ ಸೀಲನ್ನು ತೆಗೆಯುವುದು ಮತ್ತು ಉತ್ತರಿಸಲು ಪ್ರಾರಂಭಿಸುವುದು ಪರೀಕ್ಷೆಯ ಕೊನೆಯ ಐದು ನಿಮಿಷದ ಅವಧಿಯ ಬೆಲ್ ಪರೀಕ್ಷೆ ಮುಕ್ತಾಯ ಅಧಿವೇಶನ-1 (ಪತ್ರಿಕೆ-1) 9.00 A.M 9.00 ರಿಂದ 9.15 AM 9.15 AM 9.25 AM 06/11/2022 9.30 AM
11.55 A.M 12.00 ಗಂಟೆ ಮಧ್ಯಾಹ್ನ ಅಧಿವೇಶನ-2 (ಪತ್ರಿಕೆ- 2) 1.30 PM 1.30 ರಿಂದ1.45 PM 1.45 PM 1.55 PM 2.00 P.M 04.25 P.M 4.30 P.M
* ಕೈ ಗಡಿಯಾರ, ಮೊಬೈಲ್, ಕ್ಯಾಲ್ಕ್ಯುಲೇಟರ್, ಪೇಜರ್, ಬ್ಲೂಟೂತ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮತ್ತು ಲಾಗ್ಟೇಬಲ್, ಬಿಳಿ ಪ್ಲಯಡ್, ಬೆಂಕಿಪೊಟ್ಟಣ ಅಥವಾ ಸಿಗರೇಟ್ ಲೈಟರ್ ಮುಂತಾದ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಪರೀಕ್ಷಾ ಸಿಬ್ಬಂದಿಯ ತಪಾಸಣೆಗೆ ಒಳಪಡುವುದು.
1 ಪರೀಕ್ಷೆಯ ಪೂರ್ವದಲ್ಲಿ:
* ದಿನಾಂಕ : 25/10/2022 ರಿಂದ ಆನ್ಲೈನ್ನಲ್ಲಿ ಅಭ್ಯರ್ಥಿಗಳ ಪ್ರವೇಶ ಪತ್ರ (Hall Ticket) ಡೌನ್ಲೋಡ್ ಮಾಡಿಕೊಳ್ಳಬಹುದು.
* ಅಭ್ಯರ್ಥಿಯು ಪರೀಕ್ಷಾ ಪ್ರವೇಶ ಪತ್ರವನ್ನು ಸಾಕಷ್ಟು ಮುಂಚಿತವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ https://schooleducation.kar.nic.in
* ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳು, ತಾನು ಅಂತಿಮವಾಗಿ ಸಲ್ಲಿಸಿರುವ/ಸರಿಯಾಗಿ ಭರ್ತಿ ಮಾಡಿರುವ ಅರ್ಜಿಗೆ ಸಂಬಂಧಿಸಿದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಸದರಿ ಪ್ರವೇಶ ಪತ್ರದ ಅರ್ಜಿ ಸಂಖ್ಯೆಯಲ್ಲಿಯೇ ಉತ್ತರಿಸುವುದು.
* ಪರೀಕ್ಷಾ ಕೇಂದ್ರದ ವಿಳಾಸಕ್ಕೆ ಸಂಬಂಧಿಸಿದಂತೆ ವಿವರ ಬೇಕಾದಲ್ಲಿ ತಾವು ಪರೀಕ್ಷೆ ಬರೆಯಲಿರುವ ಜಿಲ್ಲೆಯ KARTET- 2022ರ ನೋಡಲ್ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆಯಬಹುದು. ನೋಡಲ್ ಅಧಿಕಾರಿಯ ದೂರವಾಣಿ ಸಂಖ್ಯೆಯನ್ನು ವೆಬ್ಸೈಟ್ನಲ್ಲಿ ಲಭ್ಯವಿರಿಸಿದೆ.
* ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ವಿನಾಯಿತಿ ಇರುವುದಿಲ್ಲ. ಅವಕಾಶವಿರುವುದಿಲ್ಲ. ಈ ಬಗ್ಗೆ ಯಾವುದೇ
* ಕೊಠಡಿಯನ್ನು ಪ್ರವೇಶಿಸಿದ ನಂತರ, ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿರುವ ತಮ್ಮ ಅರ್ಜಿಸಂಖ್ಯೆಯನ್ನು ನಮೂದಿಸಿರುವ ಡೆಸ್ಕ್ನಲ್ಲಿಯೇ ಕುಳಿತುಕೊಳ್ಳುವುದು.
2. ಪರೀಕ್ಷಾ ಕೊಠಡಿ ಪ್ರವೇಶಿಸಿದ ನಂತರ ಪರೀಕ್ಷೆ ಬರೆಯಲು ಪ್ರಾರಂಭಿಸುವುದಕ್ಕೆ ಪೂರ್ವದಲ್ಲಿ:
1. ಪ್ರವೇಶ ಪತ್ರದೊಂದಿಗೆ ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವುದು.
2.
3. ನಿಂದ ಡೌನ್ಲೋಡ್ ಮಾಡಿಕೊಂಡು, ತಮಗೆ ಹಂಚಿಕೆಯಾಗಿರುವ ಪರೀಕ್ಷಾ ಕೇಂದ್ರದ ವಿಳಾಸವನ್ನು ತಿಳಿದು, ಕನಿಷ್ಟ ಒಂದು ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಸರಿಯಾದ ವಿಳಾಸವನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು.
(ವಿಶೇಷವಾಗಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು)
5. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿರುವ ಅರ್ಜಿ ಸಂಖ್ಯೆ ನಮೂದಿಸಿರುವ ಆಸನದಲ್ಲಿ ಕುಳಿತಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು. ಪೂರ್ವ ಮುದ್ರಿತ ಓ.ಎಂ.ಆರ್.ನಲ್ಲಿ ಅಭ್ಯರ್ಥಿಯ ಅರ್ಜಿಯಲ್ಲಿನ ಮುಖ್ಯ ಅಂಶಗಳು ಪೂರ್ವ ಮುದ್ರಿತವಾಗಿರುವುದರಿಂದ ತನ್ನದೇ ಓ.ಎಂ.ಆರ್. ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು. ಅಭ್ಯರ್ಥಿಗಳು ಪೂರ್ವ ಮುದ್ರಿತ ಓ.ಎಂ.ಆರ್ ಶೀಟ್ನಲ್ಲಿ ತಮ್ಮ ಅರ್ಜಿ ಸಂಖ್ಯೆಯನ್ನು ನಿಗದಿತ ಅಂಕಣದಲ್ಲಿ ತುಂಬಿ ಶೇಡ್ ಮಾಡುವುದು ಹಾಗೂ ಈಗಾಗಲೇ ಓ.ಎಂ.ಆರ್ ಶೀಟ್ನಲ್ಲಿ ಮುದ್ರಿತವಾಗಿರುವ ಅರ್ಜಿ ಸಂಖ್ಯೆ ಹಾಗೂ ತಾವು ಬರೆದಿರುವ ಅರ್ಜಿಸಂಖ್ಯೆ ಒಂದೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು. ಪೂರ್ವ ಮುದ್ರಿತ ಓ.ಎಂ.ಆರ್ ಸಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಯನ್ನು ಸ್ವೀಕರಿಸಿದ ನಂತರ ಓ.ಎಂ.ಆರ್.ನ ಕ್ರಮಸಂಖ್ಯೆ ಪ್ರಶ್ನೆಪತ್ರಿಕೆ ಪುಸ್ತಿಕೆಯ ಕ್ರಮ ಸಂಖ್ಯೆ ಎರಡೂ ಒಂದೇ ಆಗಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.
6. ಪೂರ್ವಮುದ್ರಿತ ಓ.ಎಂ.ಆರ್ ಸಂಖ್ಯೆ ಮತ್ತು ಪ್ರಶ್ನೆಪತ್ರಿಕೆ ಪುಸ್ತಿಕೆ ಕ್ರಮಸಂಖ್ಯೆ ಒಂದೇ ಆಗದಿದ್ದಲ್ಲಿ ಅಂತಹ ಓ.ಎಂ.ಆರ್ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. ಮುಂದಿನ ಆಗುಹೋಗುಗಳಿಗೆ ಅಭ್ಯರ್ಥಿಗಳೇ ಹೊಣೆಗಾರರಾಗುತ್ತಾರೆ.
7. ಪೂರ್ವಮುದ್ರಿತ ಓ.ಎಂ.ಆರ್.ನಲ್ಲಿ ಅಭ್ಯರ್ಥಿಯು ಅರ್ಜಿ ಸಂಖ್ಯೆಯನ್ನು ನೀಡಿರುವ ನಿಗದಿತ ಅಂಕಣದಲ್ಲಿ ಅರ್ಜಿ ಸಂಖ್ಯೆಯನ್ನು ತಪ್ಪದೇ ತುಂಬಿ ಶೇಡ್ ಮಾಡುವುದು (ಓ.ಎಂ.ಆರ್ ನಲ್ಲಿ ಪೂರ್ವ ಮುದ್ರಿತವಾಗಿರುವ ಅರ್ಜಿ ಸಂಖ್ಯೆ ಮತ್ತು ಪ್ರವೇಶ ಪತ್ರದಲ್ಲಿರುವ ಅರ್ಜಿಸಂಖ್ಯೆ ಎರಡನ್ನೂ ನೋಡಿ ತಾಳೆಯಾಗುವಂತೆ ನಮೂದಿಸಬೇಕು) ಪೂರ್ವ ಮುದ್ರಿತ ಅರ್ಜಿಸಂಖ್ಯೆ ಹಾಗೂ ಪ್ರವೇಶ ಪತ್ರದಲ್ಲಿರುವ ಅರ್ಜಿ ಸಂಖ್ಯೆ ಒಂದೇ ಆಗದಿದ್ದಲ್ಲಿ ಅಂತಹ ಓ.ಎಂ.ಆರ್ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. ಮುಂದಿನ ಆಗುಹೋಗುಗಳಿಗೆ ಅಭ್ಯರ್ಥಿಗಳೇ ಹೊಣೆಗಾರರಾಗುತ್ತಾರೆ.
ಒಂದೊಮ್ಮೆ ಬೇರೆ ಓ.ಎಂ.ಆರ್ ಸಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಯನ್ನು ನೀಡಿದ್ದಲ್ಲಿ ನಿಮ್ಮದೇ ಪೂರ್ವಮುದ್ರಿತ ಓ.ಎಂ.ಆರ್ ಸಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಯನ್ನು ಪಡೆದುಕೊಂಡ ನಂತರವೇ ಉತ್ತರಿಸಲು ಪ್ರಾರಂಭಿಸುವುದು.
3. ಪರೀಕ್ಷೆಯ ಸಮಯದಲ್ಲಿ: ನಿಗದಿತ ಅವಧಿಗೆ (ಪತ್ರಿಕೆ-1, 9.30 AM ಹಾಗೂ ಪತ್ರಿಕೆ -2, 2.00 PM) ಪರೀಕ್ಷೆ ಬರೆಯಲು ಪ್ರಾರಂಭಿಸುವುದು.
ಪರೀಕ್ಷಾ ಗೌಪ್ಯತೆಗೆ ಮತ್ತು ನಿಯಮಗಳಿಗೆ ಚ್ಯುತಿ ಬರದಂತೆ ಪರೀಕ್ಷೆ ಬರೆಯುವುದು. ಪರೀಕ್ಷಾ ಅವಧಿಯಲ್ಲಿ ಕೊನೆಯ 5 ನಿಮಿಷ ಉಳಿದಿರುವ ಬಗ್ಗೆ ಎಚ್ಚರದ ಗಂಟೆಯನ್ನು ಗಮನಿಸುವುದು. ಯಾವುದೇ ಅಭ್ಯರ್ಥಿಯು ನಕಲು ಮಾಡುವುದಾಗಲೀ ಅಥವಾ ಯಾವುದೇ ರೀತಿಯ ಅನಧಿಕೃತ ಸಹಾಯವನ್ನು
ನೀಡುವುದಾಗಲೀ ಅಥವಾ ಯಾವುದೇ ತೆರನಾಗಿ ಪರೀಕ್ಷಾ ಗೌಪ್ಯಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುವುದಾಗಲೀ ಅಥವಾ ಅನುಚಿತ ಮಾರ್ಗವನ್ನು ಅನುಸರಿಸಿದಲ್ಲಿ ಅಥವಾ ಯಾವುದೇ ರೀತಿಯಲ್ಲಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದಂತಹ ಅಭ್ಯರ್ಥಿಯನ್ನು ಅನರ್ಹಗೊಳಿಸಲಾಗುವುದು ಮತ್ತು ಅಂತಹ ಅಭ್ಯರ್ಥಿಯ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
ನಿಮ್ಮ ಪ್ರವೇಶ ಪತ್ರದ ಹಿಂಭಾಗದಲ್ಲಿ ಮುದ್ರಿತವಾಗಿರುವ ಬೆಲ್ ವೇಳಾಪಟ್ಟಿಯ ಬಗ್ಗೆ ಗಮನ ಹರಿಸುವುದು. ಪೂರ್ವ ಮುದ್ರಿತ ಓ.ಎಂ.ಆರ್.ನ ಕೆಳಗೆ ನಿಗದಿಪಡಿಸಿರುವ ಚೌಕದಲ್ಲಿ ಅಭ್ಯರ್ಥಿಯು ಸಹಿ ಮಾಡಬೇಕು (ಸಹಿಯು ಅರ್ಜಿಯಲ್ಲಿ ಹಾಕಿರುವ ಸಹಿಗೆ ಹೋಲಿಕೆಯಾಗಬೇಕು) ಮತ್ತು ಎಡಗೈ ಹೆಬ್ಬೆರಳಿನ ಗುರುತನ್ನು ಸ್ಪಷ್ಟವಾಗಿ ಒತ್ತಬೇಕು. ನಂತರ ತಮ್ಮ ಕೊಠಡಿ ಮೇಲ್ವಿಚಾರಕರಿಂದ ಪೂರ್ವ ಮುದ್ರಿತ ಓ.ಎಂ.ಆರ್.ನಲ್ಲಿ ಸಹಿಯನ್ನು ಮಾಡಿಸಿಕೊಳ್ಳಬೇಕು.
ಅಭ್ಯರ್ಥಿಗಳ ಸಹಿ ಮತ್ತು ಹೆಬ್ಬೆಟ್ಟಿನ ಗುರುತು ಹಾಗೂ ಕೊಠಡಿ ಮೇಲ್ವಿಚಾರಕರ ಸಹಿ ಇಲ್ಲದಿರುವ ಓ.ಎಂ.ಆರ್.ಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ.
ನಾಮಿನಲ್ ರೋಲ್ನಲ್ಲಿ ಅಭ್ಯರ್ಥಿಗಳು ತಮ್ಮ ಹೆಸರಿನ ಮುಂದೆಯೆ ಸಹಿ ಮಾಡಬೇಕು ಹಾಗೂ ಎಡಗೈ ಹೆಬ್ಬೆರಳಿನ ಗುರುತನ್ನು ಸ್ಪಷ್ಟವಾಗಿ ಒತ್ತಬೇಕು. ಅಭ್ಯರ್ಥಿಯು ತನ್ನ ಓ.ಎಂ.ಆರ್ ಉತ್ತರ ಪತ್ರಿಕೆಯಲ್ಲಿ ತಿದ್ದುವುದು, ಅಳಿಸುವುದು ಉತ್ತರ ಬದಲಾಯಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಬಿಳಿ ಪ್ಯೂಯಿಡ್ ಹಚ್ಚಿ ಉತ್ತರ ಬದಲಾಯಿಸಲು ಅವಕಾಶವಿಲ್ಲ. ಅಂತಹ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸದೆ ಅನರ್ಹಗೊಳಿಸಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಧೂಮಪಾನ ಮಾಡುವುದು, ಇನ್ನಿತರ ಉಪಹಾರ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ. ಅಭ್ಯರ್ಥಿಯು ಉತ್ತರ ಪತ್ರಿಕೆಯನ್ನು ಒಪ್ಪಿಸುವಾಗ ನಾಮಿನಲ್ ರೋಲ್ನಲ್ಲಿ ಕಡ್ಡಾಯವಾಗಿ ಎರಡನೇ ಬಾರಿ ಸಹಿ ಮಾಡುವುದು.