ಬೆಂಗಳೂರು : ರಾಜ್ಯದ ಪಡಿತರ ಚೀಟಿ ಫಲಾನುಭವಿಗಳಿಗೆ ಆಹಾರ ಇಲಾಖೆ ಇದೀಗ ಡೆಡ್ ಲೈನ್ ನೀಡಿದ್ದು, ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಏಪ್ರಿಲ್ 30 ಕೊನೆಯ ದಿನವಾಗಿದ್ದು, ಅಷ್ಟರೊಳಗಾಗಿ ಇ-ಕೆವೈಸಿ ಮಾಡಿಸದೆ ಹೋದರೆ ಮೇ ತಿಂಗಳಿನಿಂದ ರೇಷನ್ ಕಾರ್ಡ್ ಸ್ಥಗಿತಗೊಳ್ಳಲಿದೆ.
ಹೌದು ಆಹಾರ ಇಲಾಖೆಯು ಇ-ಕೆವೈಸಿ ಮಾಡಿಸದ ಪಡಿತರ ಫಲಾನುಭವಿಗಳಿಗೆ ಏಪ್ರಿಲ್ 30ರವರೆಗೆ ಅಂತಿಮ ಗಡುವು ನೀಡಿದೆ. ಗಡುವು ಮುಗಿದ ನಂತರ, ಮೇ ತಿಂಗಳಿಂದ ಪಡಿತರ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು. ಜಿಲ್ಲೆಗಳಲ್ಲಿ ಲಕ್ಷಾಂತರ ಫಲಾನುಭವಿಗಳು ಇ -ಕೆವೈಸಿ ಮಾಡಿಸುವುದು ಬಾಕಿ ಇದ್ದು, ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ನೀಡಿ ನವೀಕರಿಸಿಕೊಳ್ಳಲು ಸೂಚಿಸಲಾಗಿದೆ.
ಗಡುವು ಅವಧಿಯೊಳಗೆ ಇ – ಕೆವೈಸಿ ಪ್ರಕ್ರಿಯೆ ಮಾಡಿಸದ ಫಲಾನುಭವಿಗಳಿಗೆ ಮುಂದಿನ ಮೇ ತಿಂಗಳಿಂದ ಪಡಿತರ ಪದಾರ್ಥಗಳ ಹಂಚಿಕೆ ನಿಲ್ಲಿಸುವ ಎಚ್ಚರಿಕೆಯನ್ನು ಅಹಾರ ಇಲಾಖೆ ನೀಡಿದೆ. ಹೀಗಾಗಿ ಮುಂದಿನ ತಿಂಗಳಿಂದ ಪಡಿತರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿಪಡೆಯಬೇಕು ಎಂದರೆ ಅಂತಹ ಫಲಾನುಭವಿಗಳು ಇ – ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇ – ಕೆವೈಸಿ ಮಾಡಿಸುವುದು ಹೇಗೆ?
ಈವರೆಗೆ ಇ-ಕೆವೈಸಿ ಮಾಡಿಸದ ಪಡಿತರ ಫಲಾನುಭವಿಗಳು ತಾವು ಪ್ರತಿ ತಿಂಗಳು ಪಡಿತರ ಪದಾರ್ಥಗಳನ್ನು ಪಡೆಯುತ್ತಿರುವ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ನೀಡಿ ತಮ್ಮ ವಿವರಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಬೇಕು. ಇದರಿಂದ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇ-ಕೆವೈಸಿ ಕಡ್ಡಾಯ
ಗಡುವು ಅವಧಿಯೊಳಗೆ ಇ -ಕೆವೈಸಿ ಪ್ರಕ್ರಿಯೆ ಮಾಡಿಸದ ಫಲಾನುಭವಿಗಳಿಗೆ ಮುಂದಿನ ಮೇ ತಿಂಗಳಿಂದ ಪಡಿತರ ಪದಾರ್ಥಗಳ ಹಂಚಿಕೆ ನಿಲ್ಲಿಸುವ ಎಚ್ಚರಿಕೆಯನ್ನು ಅಹಾರ ಇಲಾಖೆ ನೀಡಿದೆ. ಹೀಗಾಗಿ ಮುಂದಿನ ತಿಂಗಳಿಂದ ಪಡಿತರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿಪಡೆಯಬೇಕು ಎಂದರೆ ಅಂತಹ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.