ಬೆಂಗಳೂರು : ಹೆಚ್.ಆರ್.ಎಂ.ಎಸ್ -1 ತಂತ್ರಾಂಶದ ಸೇವಾ ವಹಿ ಭಾಗದಲ್ಲಿ ಅಧಿಕಾರಿ/ನೌಕರರ ಎಲ್ಲಾ ಸೇವಾ ವಿವರಗಳನ್ನು ಇಂಧೀಕರಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (2)ರ ಕರ್ನಾಟಕ ರಾಜ್ಯ ಸರ್ಕಾರದ ಸೇವೆಗೆ ಈಗಾಗಲೇ ನೇಮಕಗೊಂಡಿರುವ ಹಾಗೂ ಇನ್ನು ಮುಂದೆ ನೇಮಕಗೊಳ್ಳುವ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರ ಸೇವಾ ವಿವರಗಳನ್ನು HRMS 2.0 ತಂತ್ರಾಂಶದ “ವಿದ್ಯುನ್ಮಾನ ಸೇವಾ ವಹಿ” (Electronic Service Register) ಯಲ್ಲಿಯೇ ದಾಖಲಿಸಿ ನಿರ್ವಹಿಸಲು ಸರ್ಕಾರದ ಉಲ್ಲೇಖ (1)ರ ಸುತ್ತೋಲೆ ದಿನಾಂಕ 17.03.2023 ರಲ್ಲಿ ಆದೇಶಿಸಲಾಗಿರುತ್ತದೆ. ಅದರಂತೆ HRMS- 1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಅಧಿಕಾರಿ/ನೌಕರರ ಮಾಹಿತಿ ಲಭ್ಯವಿದ್ದು, ಸದರಿ ಮಾಹಿತಿಯನ್ನು HRMS-2 ಯೋಜನೆಯ ಭಾಗವಾಗಿರುವ “ವಿದ್ಯುನ್ಮಾನ ಸೇವಾ ವಹಿ” (Electronic Service Register) ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ (Electronic Service Register) ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿರುವುದಿಲ್ಲ. ಅದುದರಿಂದ HRMS-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಸಂಸ್ಥೆಯ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಈ ಕೂಡಲೇ ಪರಿಶೀಲಿಸಿ, ಸರಿಪಡಿಸಲು ಉಲ್ಲೇಖ (2)ರ ಸುತ್ತೋಲೆ ದಿನಾಂಕ 16-03-2024 ಮತ್ತು 16-08-202400 3.
ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ, HRMS-2 ಯೋಜನೆಯ ಭಾಗವಾಗಿರುವ “ವಿದ್ಯುನ್ಮಾನ ಸೇವಾ ವಹಿ” (Electronic Service Register) ಗೆ ವರ್ಗಾಯಿಸುವ ಸಂಬಂಧ ತರಬೇತಿಯನ್ನು ದಿನಾಂಕ 19-11-2024 ರಂದು ಬೆಳಗ್ಗೆ 11.00 ಗಂಟೆಗೆ ಈ ಕೆಳಕಂಡ (Zoom Link) ಮುಖೇನ ಆಯೋಜಿಸಿದ್ದು, ಸದರಿ ತರಭೇತಿ ಕಾರ್ಯಗಾರಕ್ಕೆ ಹಾಜರಾಗಲು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪ್ರತಿ ತಾಲ್ಲೂಕಿನಿಂದ ಹೆಚ್.ಆರ್.ಎಂ.ಎಸ್. ಮತ್ತು ಸೇವಾ ವಿಷಯದಲ್ಲಿ ಪರಿಣಿತಿ ಹೊಂದಿರುವ ಕನಿಷ್ಠ 2 ವಿಷಯ ನಿರ್ವಾಹಕರ ಹೆಸರು (Master Trainer) ಮತ್ತು ದೂರವಾಣಿ ಸಂಖ್ಯೆಯನ್ನು ಕೂಡಲೇ ತಮ್ಮ ಕಛೇರಿಯ Email ಗೆ ಕಳುಹಿಸಿರುವ ESR – Spreadsheet ನಲ್ಲಿ ನಮೂದಿಸಲು ಸೂಚಿಸಿದೆ. ತಾವು ಸೂಚಿಸುವ ಎಲ್ಲಾ ಸಿಬ್ಬಂದಿಗಳು ತರಭೇತಿಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು.