Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಾಜಿ ಟೆನಿಸ್ ದಂತಕಥೆ ‘ಲಿಯಾಂಡರ್ ಪೇಸ್’ ಬಿಜೆಪಿಗೆ ಸೇರ್ಪಡೆ

31/03/2026 4:30 PM

ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಎರಡು ಕಾರುಗಳ ಮಧ್ಯ ಅಪಘಾತ : ತಪ್ಪಿದ ಭಾರಿ ಅನಾಹುತ!

31/03/2026 4:18 PM

BREAKING : 50 ವರ್ಷಗಳ ಬಳಿಕ ‘ನಕ್ಸಲಿಸಂ ಮುಕ್ತ’ ರಾಷ್ಟ್ರವಾಗಿ ಭಾರತ ಘೋಷಣೆ!

31/03/2026 4:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5719/02/2026 7:27 AM

ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಿ, ಮೊಬೈಲ್ ಬಳಕೆ ನಿಯಂತ್ರಿಸುವ ಉದ್ದೇಶದಿಂದ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಅಭಿಯಾನವನ್ನು ಅನುಷ್ಠಾನಗೊಳಿಸಿ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ವ್ಯವಸ್ಥಿತವಾಗಿ ಬೆಳೆಸಿ, ಕ್ರಿಯಾಶೀಲ, ವಿವೇಚನೆಯುಕ್ತ ಹಾಗೂ ಉನ್ನತ ಚಿಂತನಾ ಸಾಮರ್ಥ್ಯವನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದು ಶಿಕ್ಷಣ ಇಲಾಖೆಯ ಪ್ರಮುಖ ಉದ್ದೇಶವಾಗಿರುತ್ತದೆ. ಓದುವಿಕೆಯು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸ, ಮೌಲ್ಯಾಧಾರಿತ ಚಿಂತನೆ, ಆಲೋಚನಾ ಸಾಮರ್ಥ್ಯ ಹಾಗೂ ಜೀವನ ಕೌಶಲ್ಯಗಳ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್‌ಗಳು ಹಾಗೂ ಇತರೆ ಡಿಜಿಟಲ್ ಸಾಧನಗಳ ಅತಿಯಾದ ಹಾಗೂ ಅನಿಯಂತ್ರಿತ ಬಳಕೆಯಿಂದಾಗಿ ಓದುವಿಕೆಯಲ್ಲಿ ಗಣನೀಯ ಕುಸಿತ ಉಂಟಾಗುತ್ತಿರುವುದು, ಕಲಿಕಾ ಆಸಕ್ತಿ ಗಂಭೀರವಾಗಿ ಕುಂಠಿತವಾಗುತ್ತಿರುವುದು, ಏಕಾಗ್ರತೆಯಲ್ಲಿ ಹಿನ್ನಡೆಯಾಗಿರುವುದು, ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿರುವುದು ಹಾಗೂ ಶೈಕ್ಷಣಿಕ ಸಾಧನೆಗೆ ಸ್ಪಷ್ಟ ಅಡ್ಡಿಯುಂಟಾಗುತ್ತಿರುವುದನ್ನು ಗಮನಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಓದುವ ಅಭ್ಯಾಸವನ್ನು ಪುನಶ್ಚತನಗೊಳಿಸುವ ಮೂಲಕ ಜ್ಞಾನವೃದ್ಧಿಗೆ ಪೂರಕವಾದ ಕಲಿಕಾ ವಾತಾವರಣವನ್ನು ನಿರ್ಮಿಸಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸವನ್ನು ಸಾಧಿಸುವ ಉದ್ದೇಶದಿಂದ “ಮೊಬೈಲ್ ಬಿಡಿ – ಪುಸ್ತಕ ಹಿಡಿ” ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

“ಮೊಬೈಲ್ ಬಿಡಿ – ಪುಸ್ತಕ ಹಿಡಿ” ಅಭಿಯಾನದ ಅನುಷ್ಠಾನ ಕ್ರಮಗಳು

ಶಾಲಾ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳು:

2026-27ನೇ ಸಾಲಿಗೆ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನದ ಕುರಿತ ಉಲ್ಲೇಖ(1) ರ ಸರ್ಕಾರದ ಸುತ್ತೋಲೆಯಲ್ಲಿ ಶಾಲಾ ಹಂತದಲ್ಲಿ ಎಸ್‌ಡಿಎಂಸಿ ಮತ್ತು ಪೋಷಕರ ಸಭೆಗಳನ್ನು ನಿಯಮಿತವಾಗಿ ನಡೆಸಲು ತಿಳಿಸಲಾಗಿರುತ್ತದೆ. ಸದರಿ ಸಭೆಗಳಲ್ಲಿ ಮೊಬೈಲ್ ಬಳಕೆಯ ಪರಿಣಾಮಗಳ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿರುವ ತಜ್ಞರ ಮೂಲಕ ಜಾಗೃತಿಯನ್ನು ನೀಡಲು ಕ್ರಮವಹಿಸುವುದು. ಹಾಗೂ ಮನೆಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಕೆಳಕಂಡ ಅಂಶಗಳ ಬಗ್ಗೆ ಗಮನ ಹರಿಸಲು ತಿಳಿಸುವುದು.

ಮಕ್ಕಳು ಯಾವ ಉದ್ದೇಶಕ್ಕಾಗಿ ಮೊಬೈಲ್ ಅನ್ನು ಬಳಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಅರಿತುಕೊಳ್ಳುವುದು.

ಮೊಬೈಲ್ ಬಳಕೆಯ ಸಮಯವನ್ನು ಮಿತಿಗೊಳಿಸುವುದು.

ಊಟದ ಸಮಯದಲ್ಲಿ, ಮಲಗುವ ಮುನ್ನ ಹಾಗೂ ದೈನಂದಿನ ಇತರೆ ಚಟುವಟಿಕೆಗಳನ್ನು ಮಾಡುವಾಗ ಮೊಬೈಲ್ ಬಳಕೆ ಮಾಡದೆ ಇರುವಂತೆ ಗಮನಹರಿಸುವುದು.

ಓದುವಿಕೆ ಅಥವಾ ಇತರೆ ಆಫ್‌ಲೈನ್ ಚಟುವಟಿಕೆಗಳಾದ ಆಟಗಳು, ಮನೆಯ ಸದಸ್ಯರೊಂದಿಗೆ ಸಂವಹನ ಮಾಡುವುದು, ಮಕ್ಕಳ ಅಭಿರುಚಿಗೆ ಅನುಗುಣವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು.

ಪೋಷಕರ ಮಾದರಿ ನಡವಳಿಕೆ:

ಪೋಷಕರು ಸ್ವತಃ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಓದುವಿಕೆ ಹಾಗೂ ಇತರೆ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಮಾದರಿಯಾಗುವುದು.

ಪೋಷಕರು, ಮಕ್ಕಳೊಂದಿಗೆ ಕುಳಿತು ಓದುವುದು ಅಥವಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದು.

ಮಕ್ಕಳ ಮೊಬೈಲ್ ಬಳಕೆಯನ್ನು ಮೇಲ್ವಿಚಾರಣೆ ಮಾಡಿ, ಅದು ಅವರ ಕಲಿಕೆಗೆ ಅಡ್ಡಿಯಾಗದಂತೆ ಖಚಿತಪಡಿಸಿಕೊಳ್ಳುವುದು.

ಶಾಲಾ ಹಂತದ ಜಾಗೃತಿ ಕಾರ್ಯಕ್ರಮಗಳು.

ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುವ ಸಹಪಠ್ಯ ಚಟುವಟಿಕೆಗಳಾದ ಪ್ರತಿಭಾ ಕಾರಂಜಿ, ಕಲೋತ್ಸವ, ರಾಷ್ಟ್ರೀಯ ಹಬ್ಬಗಳು, ಸಮುದಾಯದತ್ತ ಶಾಲಾ ಕಾರ್ಯಕ್ರಮಗಳಲ್ಲಿ ಪಾತ್ರಾಭಿನಯ, ಪೋಸ್ಟರ್ ಮೇಕಿಂಗ್, ನೃತ್ಯ, ಭಾಷಣ ಮುಂತಾದ ಚಟುವಟಿಕೆಗಳ ಮೂಲಕ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಸುರಕ್ಷಿತ ಮತ್ತು ಮಿತ ಬಳಕೆಯ ಬಗ್ಗೆ ಅರಿವು ಮೂಡಿಸುವುದು.

ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಅದರ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ಮತ್ತು ಜವಾಬ್ದಾರಿಯುತ ಬಳಕೆಯನ್ನು ಪ್ರೋತ್ಸಾಹಿಸುವುದು.

ಹವ್ಯಾಸಾಧಾರಿತ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಒಳಾಂಗಣ/ಹೊರಾಂಗಣ ಕ್ರೀಡೆಗಳು, ಚಿತ್ರಕಲೆ, ಹಾಡು, ಕಥೆ/ಕವನ ಬರವಣಿಗೆ, ಕಸೂತಿ ಮುಂತಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು.

ಗ್ರಂಥಾಲಯ ಬಳಕೆಗೆ ಉತ್ತೇಜನ ನೀಡಿ ಉತ್ತಮ ಪುಸ್ತಕಗಳನ್ನು ಮಕ್ಕಳಿಗೆ ಪರಿಚಯಿಸಿ ಓದುವ ಹವ್ಯಾಸವನ್ನು ಬೆಳಸಲು ಶಿಕ್ಷಕರು ಕ್ರಮವಹಿಸುವುದು. ಶಾಲೆಯಲ್ಲಿ ಲಭ್ಯವಿರುವ ಭೂಪಟ, ಶಬ್ದಕೋಶ, ವಿಶ್ವಕೋಶ ಹಾಗೂ ಇತರೆ ಉಲ್ಲೇಖ ಗ್ರಂಥಗಳ ಬಳಕೆಯ ಬಗ್ಗೆ ಮಕ್ಕಳಿಗೆ ಪರಿಚಯಿಸುವುದು. ಓದಿದ ಪುಸ್ತಕದ ಪರಿಚಯ, ಕಥೆ ಹೇಳುವ ಸ್ಪರ್ಧೆ, ವಿಮರ್ಶೆ ಬರವಣಿಗೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

ಮೈಂಡ್ ಫುಲ್‌ನೆಸ್(Mindfulness) ತಂತ್ರಗಳ ಬಳಕೆಯ ಮೂಲಕ ವಿದ್ಯಾರ್ಥಿಗಳಿಗೆ ಉಸಿರಾಟ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಅರಿವನ್ನು ಮೂಡಿಸಿ, ಧ್ಯಾನ-ಯೋಗ ಮತ್ತು ಮೈಂಡ್‌ಫುಸ್ ಅಭ್ಯಾಸಗಳನ್ನು ಪರಿಚಯಿಸುವ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡುವುದು, ಏಕಾಗ್ರತೆ ಮತ್ತು ಓದುವ ಆಸಕ್ತಿ ಹೆಚ್ಚಿಸುವುದು ಹಾಗೂ ಮೊಬೈಲ್ ಬಳಕೆಯನ್ನು ನಿಯಂತ್ರಣಕ್ಕೆ ತರುವ ತಂತ್ರಗಳನ್ನು ಕಲಿಸುವುದು.

ಶಿಕ್ಷಣ ಸಂವಹನ ಸಾಮಗ್ರಿಗಳ ಬಳಕೆ :

ಡಿ.ಎಸ್.ಇ.ಆ‌ರ್.ಟಿ website ನಲ್ಲಿ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ (NPEP) ಪ್ರಕಟಿಸಲಾಗಿರುವ Safe Use of Internet and gadgets ಕುರಿತ ಪೋಸ್ಟರ್‌ನ ಮುದ್ರಿತ ಪ್ರತಿಯನ್ನು, ಈ ಕೆಳಗಿನ ವೆಬ್‌ಸೈಟ್ ಲಿಂಕ್ ಮೂಲಕ ಪಡೆದು, ಮುದ್ರಿಸಿ ಶಾಲಾ ಫಲಕದಲ್ಲಿ ಅಳವಡಿಸಿ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸುವುದು.

      

BIG NEWS: Implementation of the 'Leave the mobile - hold the book' campaign in all schools in the state: Important order from the government!
Share. Facebook Twitter LinkedIn WhatsApp Email

Related Posts

ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಎರಡು ಕಾರುಗಳ ಮಧ್ಯ ಅಪಘಾತ : ತಪ್ಪಿದ ಭಾರಿ ಅನಾಹುತ!

31/03/2026 4:18 PM1 Min Read

ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ : ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಕೋಮಾಗೆ ಜಾರಿದ ಯುವಕ!

31/03/2026 3:59 PM1 Min Read

SHOCKING : ಖರ್ಚಿಗೆ ಹಣ ಕೊಡಲಿಲ್ಲವೆಂದು ಮಂಗಳಮುಖಿಯರ ಮೇಲೆ ಮಚ್ಚಿನಿಂದ ಹಲ್ಲೆ : ಬೆಚ್ಚಿಬಿದ್ದ ಮೈಸೂರು ಜನತೆ!

31/03/2026 3:44 PM1 Min Read
Recent News

BREAKING : ಮಾಜಿ ಟೆನಿಸ್ ದಂತಕಥೆ ‘ಲಿಯಾಂಡರ್ ಪೇಸ್’ ಬಿಜೆಪಿಗೆ ಸೇರ್ಪಡೆ

31/03/2026 4:30 PM

ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಎರಡು ಕಾರುಗಳ ಮಧ್ಯ ಅಪಘಾತ : ತಪ್ಪಿದ ಭಾರಿ ಅನಾಹುತ!

31/03/2026 4:18 PM

BREAKING : 50 ವರ್ಷಗಳ ಬಳಿಕ ‘ನಕ್ಸಲಿಸಂ ಮುಕ್ತ’ ರಾಷ್ಟ್ರವಾಗಿ ಭಾರತ ಘೋಷಣೆ!

31/03/2026 4:09 PM

ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ : ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಕೋಮಾಗೆ ಜಾರಿದ ಯುವಕ!

31/03/2026 3:59 PM
State News
KARNATAKA

ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಎರಡು ಕಾರುಗಳ ಮಧ್ಯ ಅಪಘಾತ : ತಪ್ಪಿದ ಭಾರಿ ಅನಾಹುತ!

By kannadanewsnow0531/03/2026 4:18 PM KARNATAKA 1 Min Read

ಬೆಂಗಳೂರು : ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ…

ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ : ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಕೋಮಾಗೆ ಜಾರಿದ ಯುವಕ!

31/03/2026 3:59 PM

SHOCKING : ಖರ್ಚಿಗೆ ಹಣ ಕೊಡಲಿಲ್ಲವೆಂದು ಮಂಗಳಮುಖಿಯರ ಮೇಲೆ ಮಚ್ಚಿನಿಂದ ಹಲ್ಲೆ : ಬೆಚ್ಚಿಬಿದ್ದ ಮೈಸೂರು ಜನತೆ!

31/03/2026 3:44 PM

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಕೆಲಸದಿಂದ ತೆಗೆದು ಹಾಕಿದಕ್ಕೆ ಚಾಕು ಇರಿದು ಮ್ಯಾನೇಜರ್ ಬರ್ಬರ ಹತ್ಯೆ!

31/03/2026 3:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.