Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ: ಐವರು ಆರೋಪಿಗಳು ಸಿಬಿಐ ವಶಕ್ಕೆ | NEET-UG 2026 paper leak

ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್: ಕೇಜ್ರಿವಾಲ್ ಮತ್ತು ಇತರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ

ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ: 40 ವರ್ಷ ಹಳೆಯ ತಂತ್ರಜ್ಞಾನಕ್ಕೆ ವಿದಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಶಾಲಾಗಳಲ್ಲಿ `ಪ್ರತಿಭಾಕಾರಂಜಿ/ಕಲೋತ್ಸವ’ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯದ ಎಲ್ಲಾ ಶಾಲಾಗಳಲ್ಲಿ `ಪ್ರತಿಭಾಕಾರಂಜಿ/ಕಲೋತ್ಸವ’ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

By kannadanewsnow57

ಬೆಂಗಳೂರು : 2025-26 ನೇ ಸಾಲಿನ ಪ್ರತಿಭಾಕಾರಂಜಿ/ಕಲೋತ್ಸವ ಕಾರ್ಯಕ್ರಮ ಅನುಷ್ಠಾನಗೊಳಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು 2002ನೇ ಸಾಲಿನಿಂದ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯಕ್ರಮವು ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು, ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ.

ಉಲ್ಲೇಖಿತ ಆದೇಶ/ಪತ್ರಗಳಂತೆ 2025-26ನೇ ಸಾಲಿನಲ್ಲಿ ರಾಜ್ಯವಲಯದ ಮುಂದುವರೆದ ಯೋಜನಾ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾಮಕ್ಕಳಿಗೆ (1 ರಿಂದ 10ನೇ ತರಗತಿ) ಏಕ ರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳನ್ನು ಮತ್ತು 09 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ, ಕಲೋತ್ಸವ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಸ್ಪರ್ಧೆಗಳನ್ನು ನಡೆಸುವ ವಿಧಾನ ಕುರಿತಂತೆ ಲಗತ್ತಿಸಿರುವ ಅನುಬಂಧ-1,2,3 ಹಾಗೂ 4 ರಲ್ಲಿ ವಿವರಿಸಲಾಗಿದ್ದು ಅದರಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ಹಂತದ ಅಧಿಕಾರಿಗಳು ಸಮುದಾಯದ ಸಹಕಾರದೊಂದಿಗೆ ಸ್ಥಳೀಯ ಹಬ್ಬದ ರೀತಿಯಲ್ಲಿ ಉತ್ತಮವಾಗಿ ಆಯೋಜಿಸಲು ಸೂಚಿಸಿದೆ.

ಸ್ಪರ್ಧೆಗಳ ಆಯೋಜನೆ ಮತ್ತು ಸ್ಪರ್ಧಾ ನಿಯಮಗಳು:

ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾಗಿರುವುದರಿಂದ ಶಾಲಾ ಹಂತದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.

ಎಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಯಾವುದಾದರೂ 2 ವಿಷಯಗಳಲ್ಲಿ ಮಾತ್ರ ಮತ್ತು ಸಾಮೂಹಿಕ ವಿಭಾಗದಲ್ಲಿ ಯಾವುದಾದರೂ 1 ವಿಷಯದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.

ಯಾವುದೇ ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದ ಸ್ಪರ್ಧಾ ವಿಷಯದಲ್ಲಿ ಕನಿಷ್ಠ 3 ವಿದ್ಯಾರ್ಥಿಗಳು/ 3 ಗುಂಪುಗಳು ಭಾಗವಹಿಸಬೇಕು. ಭಾಷಾ ಅಲ್ಪ ಸಂಖ್ಯಾತ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿಗಧಿ ಇರುವುದಿಲ್ಲ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಸಿ, ಬಹುಮಾನ ಘೋಷಣೆ ಮಾಡಿ ಉಳಿದ ಮೊತ್ತವನ್ನು ಸರ್ಕಾರದ ಲೆಕ್ಕಶೀರ್ಷಿಕೆ ಜಮಾ ಮಾಡುವುದು. ಇದು ಎಲ್ಲಾ ಹಂತದ /ವಿಭಾಗಗಳ ಸ್ಪರ್ಧೆಗಳಿಗೂ ಅನ್ವಯಿಸುತ್ತದೆ.

“ಚಿತ್ರಕಲಾ ಸ್ಪರ್ಧೆಗೆ ಸಂಬಂಧಿಸಿದಂತೆ ಬಣ್ಣ, ಬ್ರಷ್ ಇತ್ಯಾದಿಗಳನ್ನು ಸ್ಪರ್ಧಾಳುಗಳೇ ತರಬೇಕು. ಸಂಘಟಕರು ಕಡ್ಡಾಯವಾಗಿ ಸ್ಪರ್ಧಿಗಳಿಗೆ ಒಂದೇ ಅಳತೆಯ

ಡ್ರಾಯಿಂಗ್ ಶೀಟ್ ನೀಡುವುದು.

ಜಾನಪದ ನೃತ್ಯ, ಕೋಲಾಟ ಇವುಗಳಿಗೆ ಉಡುಪು, ವರ್ಣಾಲಂಕಾರ, ಪಕ್ಕವಾದ್ಯ, ಹಾಡುಗಾರಿಕೆ ಇವುಗಳನ್ನು ಸ್ಪರ್ಧಾರ್ಥಿಗಳೇ ಒದಗಿಸಿಕೊಳ್ಳಬೇಕು.

ಕ್ಷೇ ಮಾಡಲಿಂಗ್ ಗೆ ಜೇಡಿ ಮಣ್ಣನ್ನು ಸ್ಪರ್ಧಾಳುಗಳೇ ತರಬೇಕು.

ರಂಗೋಲಿ ಸ್ಪರ್ಧೆಗೆ ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು.

ಸ್ಪರ್ಧೆಗಳ ದಿನಾಂಕ ಮತ್ತು ಇನ್ನಿತರ ವಿವರಗಳನ್ನು ನಿಗಧಿ ಪಡಿಸಿರುವಂತೆ ಎಲ್ಲಾ ಶಾಲೆಗಳಿಗೂ ಸಾಕಷ್ಟು ಮುಂಚಿತವಾಗಿ ಸುತ್ತೋಲೆಗಳನ್ನು ಕಳುಹಿಸಿ, ಅರ್ಹ ವಿದ್ಯಾರ್ಥಿಗಳು ಈ ಅವಕಾಶದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು.
ಸ್ಪರ್ಧೆಗಳನ್ನು ನಡೆಸಿದ ಕೂಡಲೇ ಮುಂದಿನ ಹಂತದ ಸ್ಪರ್ಧೆಗೆ ಸಹಾಯವಾಗುವಂತೆ ನಿಗಧಿಪಡಿಸಿದ ದಿನಾಂಕದೊಳಗೆ ವಿಜೇತರ ಸಂಬಂಧಿಸಿದವರಿಗೆ ಕಳುಹಿಸಬೇಕು.

BIG NEWS: Implementation of `Pratibhakaranji/Kalotsava' program in all schools in the state: Important order from the Education Department!
Share. Facebook Twitter LinkedIn WhatsApp Email

Related Posts

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

2 Mins Read

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

1 Min Read

BREAKING : ದಾವಣಗೆರೆಯಲ್ಲಿ ಘೋರ ದುರಂತ : ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು!

1 Min Read
Recent News

BREAKING: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ: ಐವರು ಆರೋಪಿಗಳು ಸಿಬಿಐ ವಶಕ್ಕೆ | NEET-UG 2026 paper leak

ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್: ಕೇಜ್ರಿವಾಲ್ ಮತ್ತು ಇತರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ

ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ: 40 ವರ್ಷ ಹಳೆಯ ತಂತ್ರಜ್ಞಾನಕ್ಕೆ ವಿದಾಯ

​ಕ್ಯಾನ್ಸರ್ ರೋಗಿಗಳಿಗೆ ವರದಾನ: ಭಾರತದಲ್ಲಿ 7 ನಿಮಿಷದ ‘ಮ್ಯಾಜಿಕ್’ ಇಂಜೆಕ್ಷನ್ ಲಾಂಚ್!

State News
KARNATAKA

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮೇ 14ರಿಂದ 17ರವರೆಗೆ ನಡೆಯಲಿರುವ ಇಎಲ್‌ಎಎಸ್‌ಐಎ 2026 ಭಾಗವಾದ ರಿನ್ಯೂವೆಬಲ್ ಏಷ್ಯಾ ಅಂಡ್‌…

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

BREAKING : ದಾವಣಗೆರೆಯಲ್ಲಿ ಘೋರ ದುರಂತ : ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು!

BREAKING: ಮೇ.24ರಂದು ನಿಗದಿಯಾಗಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.