ಚಿತ್ರದುರ್ಗ : ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು ಹಿನ್ನಲೆಯಲ್ಲಿ ರಾಜ್ಯದ ಜನರು ಬಸ್ ಗಳಿಲ್ಲದೆ ತೀವ್ರ ಪರದಾಟ ನಡೆಸುತ್ತಿದ್ದಾರೆ ಇದೀಗ ಚಿತ್ರದುರ್ಗದಲ್ಲಿ ಬಾಣಂತಿಯೊಬ್ಬರು ಬಸ್ ಇಲ್ಲದೆ ಪರದಾಟ ನಡೆಸಿದ್ದಾರೆ.
ಹೌದು ಚಿತ್ರದುರ್ಗದಲ್ಲಿ ಸಾರಿಗೆ ಬಸ್ ಇಲ್ಲದೆ ಬಾಣಂತಿ ಒಬ್ಬರು ಪರದಾಟ ನಡೆಸಿದ್ದಾರೆ ಹೆರಿಗೆ ಬಳಿಕ ಮೊದಲ ಸಲ ಬಾಣತಿ ಪತಿ ಊರಿಗೆ ತೆರಳುತ್ತಿದ್ದರು. ಮಗು ಮತ್ತು ಅತ್ತೆಯ ಜೊತೆಗೆ ಬಾಣತಿ ಪತಿ ಊರಿಗೆ ಹೊರಟಿದ್ದರು. ಆದರೆ ಬಸ್ ಗಳಿಲ್ಲದೆ ಇದೀಗ ಬಾಣಂತಿ ಪರದಾಡಿದ್ದಾರೆ.
ಜಗಳೂರು ಹತ್ರ ಹೊಸದುರ್ಗ ಊರಿಗೆ ನಾವು ಹೋಗಬೇಕಿತ್ತು, ಆದರೆ ಬಸ್ ಇಲ್ಲ ಮೊದಲ ಬಾರಿ ಹೆರಿಗೆಯಾದ ಬಳಿಕ ಪತಿಯ ಮನೆಗೆ ಹೊರಟಿದ್ದೆ. ನಮ್ಮ ಅತ್ತೆಯ ಜೊತೆ ಪತಿಯ ಮನೆಗೆ ಹೊರಟಿದ್ದೆ ಇದೀಗ ಖಾಸಗಿ ವಾಹನಗಳನ್ನು ನೋಡಿಕೊಳ್ಳಬೇಕು. ಸರ್ಕಾರಿ ಬಸ್ ಇಲ್ದೆ ಇದ್ರೆ ಖಾಸಗಿ ವಾಹನಗಳಿಗೆ ದುಡ್ಡು ಕೊಡಲೇಬೇಕು ಎಂದು ಬಾಣಂತಿ ತಿಳಿಸಿದರು.