ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ, ಪರಪ್ಪನ ಅಗ್ರಹಾರ ಜೈಲು ಸೇರಿ, ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಅದಾದ ಬಳಿಕ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ರಾಮನಗರ ಪೊಲೀಸ್ರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ಶಾಸಕ ಮುನಿರತ್ನ ಅವರ ಕಚೇರಿ ಸಿಬ್ಬಂದಿಗಳಿಂದ ಸ್ಪೋಟಕವಾದಂತಹ ಆಡಿಯೋ ಇದೀಗ ವೈರಲ್ ಆಗಿದೆ.
ಹೌದು ದೇವರಾಜ ಅರಸು ನಿಗಮದ ಸಾರಥಿ ಯೋಜನೆ ಅಡಿಯಲ್ಲಿ ಫಲಾನುಭಾವಿಗಳಿಗೆ ವಾಹನ ವಿತರಿಸಲು, ಬಿಜೆಪಿ ಶಾಸಕ ಮುನಿರತ್ನ ಅವರ ಕಚೇರಿಯ ಸಿಬ್ಬಂದಿ ಫಲಾನುಭವಿಗಳ ಹತ್ತಿರ ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವಂತಹ ಆಡಿಯೋ ಇದೀಗ ವೈರಲ್ ಆಗಿದೆ. ವಾಹನ ನೀಡಲು 1 ಲಕ್ಷ ರೂ. ಲಂಚ ನೀಡುವಂತೆ ಶಾಸಕ ಮುನಿರತ್ನ ಕಚೇರಿ ಸಿಬ್ಬಂದಿ ಉಷಾ ಕೇಳಿದ್ದಾರೆ ಅಂತ ಫಲಾನುಭವಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
3 ಲಕ್ಷ ರೂ. ಮೌಲ್ಯದ ವಾಹನ ನೀಡಲು 1 ಲಕ್ಷ ರೂ. ಲಂಚ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈಗಾಲೇ 20 ಸಾವಿರ ರೂ. ಕೊಟ್ಟಿದ್ದೇನೆ. ವಾಹನ ಕೊಡಬೇಕೆಂದರೆ ಇನ್ನೂ 80 ಸಾವಿರ ಕೊಡಿ ಎಂದು ಮುನಿರತ್ನ ಕಚೇರಿ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ ಎಂದು ಫಲಾನುಭವಿ ಮತ್ತು ಕಾಂಗ್ರೆಸ್ ಮುಖಂಡ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
Shocking:ಪ್ಲಾಸ್ಟಿಕ್ ಮಾಲಿನ್ಯವು ಮಾನವನ ಆರೋಗ್ಯಕ್ಕೆ ಅಪಾಯವನ್ನು ಹೆಚ್ಚಿಸುತ್ತಿದೆ: ತಜ್ಞರ ವಿಶ್ಲೇಷಣೆ
BREAKING : ಬೆಂಗಳೂರಿನಲ್ಲಿ ಮಹಿಳೆಯ ಹತ್ಯೆ ಕೇಸ್ : ಮಹಾಲಕ್ಷ್ಮಿ ಸ್ನೇಹಿತ ಅಶ್ರಫ್ ಮೇಲೆ ಅನುಮಾನ ಇದೆ ಎಂದ ಪತಿ!