ಬೆಂಗಳೂರು : ಜಾತಿ ಗಣತಿ ವರದಿಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ ಎಂದು ಇತ್ತೀಚಿಗೆ ವರದಿ ಬಹಿರಂಗವಾಗಿತ್ತು. ಇನ್ನು ಈ ಒಂದು ವರದಿಯಲ್ಲಿ ಮುಸ್ಲಿಮರು ಹೆಚ್ಚಾಗಿದ್ದಾರೆ ಎಂದು ಲೇಖವಾಗಿದ್ದು ಹಾಗಾದರೆ ಮುಸ್ಲಿಮರು ರಾಜ್ಯದಲ್ಲಿ ಅಲ್ಪಸಂಖ್ಯಾತರು ಹೇಗೆ ಆಗುತ್ತಾರೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಅವರು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿ ಬಗ್ಗೆ ಸಂಪುಟದ ಸಚಿವರಿಗೆ ಸಮಾಧಾನ ಪಡಿಸಲು ಆಗಿಲ್ಲ. ಜಾತಿಗಣತಿ ವರದಿಯ ಬಗ್ಗೆ ನಿಮ್ಮ ಶಾಸಕರನ್ನು ಒಪ್ಪಿಸಲಾಗಿಲ್ಲ. ಇನ್ನು ರಾಜ್ಯದ ಜನರಿಗೆ ಹೇಗೆ ಒಪ್ಪಿಸುತ್ತೀರಿ? ಮೊದಲು ನಿಮ್ಮ ಸಚಿವರು ಹಾಗೂ ಶಾಸಕರನ್ನು ಜಾತಿಗಣತಿ ವರದಿ ಬಗ್ಗೆ ಸಮಾಧಾನಪಡಿಸಿ. ಸದಸ್ಯ ಕಾರ್ಯದರ್ಶಿಯೇ ಜಾತಿಗಣತಿ ಸಮೀಕ್ಷೆಗೆ ಸಹಿ ಹಾಕಿಲ್ಲ. ಇನ್ನು ಅದಕ್ಕೆ ಹೇಗೆ ಮಾನ್ಯತೆ ಸಿಗುತ್ತದೆ? ಎಂದು ಪ್ರಶ್ನಿಸಿದರು.
ಕೆಲ ಸಮುದಾಯಗಳ ಸಂಖ್ಯೆ ಹೆಚ್ಚಾಗಿದೆ. ಇನ್ನು ಕೆಲವರದ್ದು ಕಡಿಮೆ ಆಗಿದೆ. ಇದನ್ನು ಹೇಗೆ ಸರಿಪಡಿಸುತ್ತೀರಿ? ಜಾತಿಗಣತಿ ಸಮೀಕ್ಷೆ ಸರಿಯಾಗಿ ಆಗಿಲ್ಲ. ರಾಜ್ಯದ ನಂಬರ್ ಒನ್ ಜನಸಂಖ್ಯೆ ಮುಸ್ಲಿಂ ಅಂತ ಹೇಳಿದ್ದಾರೆ. ಹಾಗಾದರೆ ಮುಸ್ಲಿಮರು ಹೇಗೆ ಮೈನಾರಿಟಿ ಆಗುತ್ತಾರೆ? ನಿಮ್ಮ ವರದಿ ಪ್ರಕಾರ ಮುಸ್ಲಿಮರು ನಿಜವಾದ ಅಲ್ಪಸಂಖ್ಯಾತರಲ್ಲ ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ ಆಗ ಸಮಗ್ರವಾಗಿ ಚರ್ಚೆ ಮಾಡೋಣ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಹೇಳಿಕೆ ನೀಡಿದರು.