ಬೆಂಗಳೂರು : ಸಪ್ಟೆಂಬರ್ ಬಳಿಕ ರಾಜ್ಯದಲ್ಲಿ ಬಹುದೊಡ್ಡ ಕ್ರಾಂತಿ ಆಗಲಿದ್ದು, ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದ್ದರು. ಆದರೆ ಇದೀಗ ಸಹಕಾರ ಸಚಿವ ಅಚ್ಚರಿಯ ಹೇಳಿಕೆ ನೀಡಿದದ್ದು, ನಮ್ಮ ಸರ್ಕಾರ ಬಂಡೆಯಂತೆ ಸುಭದ್ರವಾಗಿ ಐದು ವರ್ಷ ಪೂರೈಸಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಇದ್ದರೆ ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರುತ್ತಾರೆ. ಮತ್ತೆ ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಕಾಂತಿ ಮುಂದಿನ ದಿನ ನೋಡೋಣ ಅಡಿಗೆ ಶಿವಕುಮಾರ್ ಸಿಎಂ ಅಂತ ಅವರ ಅಭಿಪ್ರಾಯ ಹೇಳಿದ್ದಾರೆ ಅದಕ್ಕೆ ಮಹತ್ವ ಯಾಕೆ ಕೊಡಬೇಕು ಅದು ಕಾರ್ಯಕರ್ತರ ಅಭಿಪ್ರಾಯ ಪಕ್ಷದ್ದು ಅಲ್ಲ. ಸರ್ಕಾರ ಬಂಡೆಯಂತೆ ಇರುತ್ತೆ ಅಂತ ಸಿಎಂ, ಡಿಸಿಎಂ ಹೇಳಿದ್ದಾರೆ. ಬದಲಾವಣೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ಪಕ್ಷಗಳಲ್ಲೂ ಬದಲಾವಣೆ ಆಗುತ್ತಿರುತ್ತವೆ, ಏನೇನು ಬದಲಾವಣೆ ಆಗುತ್ತವೆ ಅಂತ ಮುಂದಿನ ದಿನಗಳಲ್ಲಿ ನೋಡೋಣ ಎಂದರು.