ಬೆಂಗಳೂರು : ಕಾಶ್ಮೀರದ ಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯಿಂದ 26 ಜನ ಪ್ರವಾಸಿಗರು ಬಲಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದ್ದು, ಭಾರತ ಏನಾದರೂ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದರೆ ಒಂದೇ ವಾರದಲ್ಲಿ ಸರ್ವನಾಶವಾಗುತ್ತದೆ ಎಂದು ಹೇಳಿಕೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏಕಾಏಕಿ ಪಾಕಿಸ್ತಾನ ಉಗ್ರರು ನಮ್ಮ ದೇಶಕ್ಕೆ ನುಗ್ಗಿ ದಾಳಿ ಮಾಡಿದ್ದಾರೆ. ನಾವೆಲ್ಲರೂ ಈ ಒಂದು ಘಟನೆ ಖಂಡಿಸಬೇಕಾದ ವಿಚಾರ. ಕೇಂದ್ರಕ್ಕೆ ನಮ್ಮ ನಾಯಕರು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಮೊದಲು ಭದ್ರತೆ ಸರಿ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ಬಿ ವೈ ವಿಜಯೇಂದ್ರ ಮಾತನಾಡುತ್ತಿದ್ದಾರೆ.
ಕೇಂದ್ರ ಸರ್ಕಾರವೇ ಭದ್ರತಾ ವೈಫಲ್ಯ ಅಂತ ಒಪ್ಪಿಕೊಂಡಿದೆ. ಅನಿವಾರ್ಯ ಇದ್ದರೆ ಯುದ್ಧ ಮಾಡಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾಳೆ ಇಂದಲೇ ಯುದ್ಧ ಶುರು ಮಾಡಿ ಯಾರು ಬೇಡ ಅಂದ್ರು? ಉಗ್ರರ ಕ್ಯಾಂಪ್ ಮೇಲೆ ಬಾಂಬ್ ಹಾಕಿ. ಕಾಶ್ಮೀರದಲ್ಲಿ ಸಿಲುಕಿದವರನ್ನು ನಾವೇ ವಿಮಾನದ ಮೂಲಕ ಕರೆತಂದಿದ್ದೇವೆ. ಮೊದಲು ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಕ್ಕೆ ಭೇಟಿ ನೀಡಬೇಕು. ಕೂಡಲೇ ವಿಶೇಷ ಸಂಸತ್ ಅಧಿವೇಶನ ಕರೆಯಬೇಕು. ಪಾಕಿಸ್ತಾನ ಉಗ್ರಗಾಮಿಗಳ ತಾಣ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸೇನೆಯ ನೇಮಕಾತಿಯಲ್ಲಿ 1 ಲಕ್ಷ 45 ಸಾವಿರ ಹುದ್ದೆಗಳು ಖಾಲಿ ಇವೆ. ಪಾಕಿಸ್ತಾನದವರು ಯಾವಾಗ ಏನು ಮಾಡುತ್ತಾರೋ ಗೊತ್ತಿಲ್ಲ. ಹೀಗಾಗಿ ಕೂಡಲೇ ಸಭೆ ಕರೆದು ನೇಮಕಾತಿ ಮಾಡಿ. ಪಾಕಿಸ್ತಾನಕ್ಕೆ ಸಿಂಧೂ ನರಿ ನೀರು ಬಂದ್ ಮಾಡಿದ್ದರೆ ಸ್ವಾಗತ. ಸಿಂಧೂ ನದಿ ನಿಲ್ಲಿಸಿದರು ಹರಿದು ಹೋಗುತ್ತದೆ 6 ಉಪನದಿಗಳಿವೆ. ಭಾರತ ಯುದ್ಧ ಮಾಡಿದರೆ ವಾರಕ್ಕೆ ನಾಶಮಾಡುವ ಶಕ್ತಿ ಇದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ತೀರ್ಮಾನವನ್ನೇ ಪ್ರಧಾನಿ ಮೋದಿ ಅನುಸರಿಸಬೇಕು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದರು.