ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಆಗಲಿದೆ ಎಂದು ಭಾರಿ ಚರ್ಚೆ ನಡೆಯುತ್ತಿದೆ. ಅಲ್ಲದೆ ಸಚಿವ ಸಂಪುಟ ಬದಲಾವಣೆ ಸಹ ಆಗಲಿದೆ ಎಂದು ಹೇಳಲಗುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದು, ಸಚಿವ ಸಂಪುಟಕ್ಕೆ ಸೇರಿತ್ತೀರಾ ಎಂಬ ಪ್ರಶ್ನೆಗೆ ಮಂತ್ರಿ ಆಸೆ ಯಾರಿಗಿರಲ್ಲ ಹೇಳಿ ಅವಕಾಶ ಕೊಟ್ಟರು ಕೊಡಬಹುದು ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ಆದರೆ ಅದು ಬಿಜೆಪಿಯಲ್ಲೇ ಆಗಬಹುದು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕಣ್ಣನ ಚೇರ್ ಗೆ ಸುನೀಲ ಅಣ್ಣ ಬರುತ್ತಾರೆ. ಅಶೋಕ್ ಅವರ ಕುರ್ಚಿ ಹೋಗುತ್ತೆ, ಇದೆ ಕ್ರಾಂತಿ ಅನ್ನಿಸುತ್ತೆ. ಪ್ರಯಶಹ ಬದಲಾವಣೆ ಇರಬಹುದೇನೋ? ಎಂದು ತಿಳಿಸಿದರು.








