ಹಾವೇರಿ : ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಗುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂತಹ ಪತ್ರಗಳು ಬಂದು ಹೋಗಿವೆ ಆದರೆ ಇದು ಪ್ರಿಯಾಂಕ ಖರ್ಗೆ ಗೊತ್ತಿಲ್ಲ ಎಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದರು.
ಮುತ್ತಾತ ಅವರು ಆಕ್ರಮಣಕ್ಕೆ ಒಳಗಾಗಿದ್ದರು. ರಾಹುಲ್ ಗಾಂಧಿ ಮುತ್ತಾತ ನರಸಿಂಹರಾವ್ ಕಡಿವಾಣಕ್ಕೆ ಮುಂದಾಗಿದ್ದರು. ದೇಶದಲ್ಲಿ ಮೂರನೇ ಸಲ ಬಿಜೆಪಿ ಅಧಿಕಾರಕ್ಕೆ ಬಂದಿದೆ ಒಂದು ವೇಳೆ ಆರ್ ಎಸ್ ಎಸ್ ಕೆ ನಿರ್ಬಂಧ ಹಾಕಿದರೆ ನಾವು ಸುಮ್ಮನಿರಲ್ಲ ಕುಕ್ಕರ್ ಹಿಡಿದವರು, ತಲ್ವಾರ್ ಇವರಿಗೆ ಬ್ರದರ್ಸ್ ಇದ್ದಂತೆ. ತಲ್ವಾರ್ ಹಿಡಿದು ತಿರುಗಾಡುವವರನ್ನು ಬಂಧಿಸಿ ನೋಡೋಣ ಎಂದು ಸವಾಲು ಹಾಕಿದರು.
ಆರ್ ಎಸ್ ಎಸ್ ಭಾರತದ ತಾಲಿಬಾನಿಗಳು ಎಂದು ಎಂಎಲ್ಸಿ ಬಿ ಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಆರ್ ಎಸ್ ಎಸ್ ಗೆ ಬೈದರೆ ಮಂತ್ರಿ ಮಾಡುತ್ತಾರೆ ಅಂತ ಹರಿಪ್ರಸಾದ್ ಅಂದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಚಡ್ಡಿ ಹಾಕ್ಕೊಂಡಿದ್ದನ್ನ ತಿಳಿಯಬೇಕು. ಅದು ಖಾಕಿ ಚಡ್ಡಿ ಅಥವಾ ಬೇರೆ ಚಡ್ಡಿನೋ ಎಂದು ಮೊದಲು ತಿಳಿದುಕೊಳ್ಳಲಿ ಎಂದು ಆಕ್ರೋಶ ಹೊರ ಹಾಕಿದರು.