ಶಿವಮೊಗ್ಗ : ಕೆಎಫ್‌ಡಿ ರೋಗದ ಹರಡುವಿಕೆ ಪ್ರಮಾಣ ಅರ್ಥ ಮಾಡಿಕೊಂಡು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ಐಸಿಎAಆರ್) ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಎಪಿಡೆಮಿಯಾಲಜಿಯು ಜಿಲ್ಲೆಯಲ್ಲಿ ಸೀರೋಸರ್ವೇ ನಡೆಸಿತು.
ಕ್ಯಾಸನೂರು ಫಾರೆಸ್ಟ್ ಡಿಸೀಜ್ (ಕೆಎಫ್‌ಡಿ) ಸಾಮಾನ್ಯವಾಗಿ ಮಂಗನ ಜ್ವರವೆಂದು ಕರೆಯಲ್ಪಡುವ ಈ ರೋಗವು ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಈ ರೋಗವು ಕೇವಲ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಂಡುಬAದಿದ್ದರೆ, ಈಗ ಇದು ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಹಾಗು ಪಕ್ಕದ ರಾಜ್ಯಗಳಲ್ಲಿಯೂ ಹರಡಿದೆ.
ಈ ರೋಗದ ಹರಡುವಿಕೆ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ಐಸಿಎAಆರ್) ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಎಪಿಡೆಮಿಯಾಲಜಿ(ಎನ್‌ಐಇ) ವಿಭಾಗವು ಪಶ್ಚಿಮಘಟ್ಟದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಹಾಗೂ ವಯಸ್ಕರಲ್ಲಿ ಕೆಎಫ್‌ಡಿ ಸೀರೋಸರ್ವೇ(ರಕ್ತಸಾರ ಸಮೀಕ್ಷೆ) ನಡೆಸುತ್ತಿದೆ. ಈ ಸೀರೋಸರ್ವೇಯನ್ನು ಕರ್ನಾಟಕ, ಮಹಾರಾಷ್ಟç, ಗೋವಾ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ನಡೆಸಲಾಗುವುದು.
ಕರ್ನಾಟಕದಲ್ಲಿ ಈ ಸೀರೋಸರ್ವೇ ಅನ್ನು ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ. ಈ ಅಧ್ಯಯನಕ್ಕಾಗಿ ಕರ್ನಾಟಕದ ಎಂಟು ಜಿಲ್ಲೆಗಳ 51 ಗ್ರಾಮಗಳಲ್ಲಿ ಸೀರೋಸರ್ವೇ ನಡೆಸಲಾಗುವುದು. ಇವುಗಳಲ್ಲಿ ಹಿಂದೆ ಕೆಎಫ್‌ಡಿ ಪ್ರಕರಣಗಳು ಕಂಡುಬAದ 20 ಗ್ರಾಮಗಳನ್ನು ವಿಶೇಷವಾಗಿ ಆಯ್ಕೆ ಮಾಡಲಾಗಿದೆ.
ಸಮೀಕ್ಷೆ ಯೋಜನೆಯಂತೆ, ಎನ್‌ಐಇ ಚೆನ್ನೆöÊ ತಂಡವು ಉತ್ತರ ಕನ್ನಡ ಜಿಲ್ಲೆಯ 10 ಗ್ರಾಮಗಳು, ಉಡುಪಿ ಜಿಲ್ಲೆಯ 6, ಶಿವಮೊಗ್ಗದ 7, ಕೊಡಗಿನ 8, ಹಾಸನದ 1, ದಕ್ಷಿಣ ಕನ್ನಡದ 14, ಚಿಕ್ಕಮಗಳೂರಿನ 4 ಹಾಗೂ ಬೆಳಗಾವಿಯ 1 ಗ್ರಾಮಗಳಲ್ಲಿ ಸಿರೋಸರ್ವೇ ನಡೆಸಲಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಮಾ.22 ರಿಂದ ಏ.15 ರವರೆಗೆ ಸೀರೋ ಸರ್ವೆ ನಡೆಸಲಾಯಿತು.
ಪ್ರತಿ ಗ್ರಾಮದಲ್ಲಿ 6 ರಿಂದ 18 ವರ್ಷದೊಳಗಿನ 14 ಮಕ್ಕಳಿಂದ ಹಾಗೂ 18 ರಿಂದ 50 ವರ್ಷದೊಳಗಿನ 22 ಜನ ವಯಸ್ಕರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಈ 36 ಜನರನ್ನು ಸದರಿ ಗ್ರಾಮಗಳಲ್ಲಿ ರ‍್ಯಾಂಡಮ್ ಆಗಿ ಆಯ್ಕೆ ಮಾಡಲಾಗುತ್ತದೆ. ಸಂಗ್ರಹಿಸಿದ ರಕ್ತದ ಮಾದರಿಗಳನ್ನು ನಿಯಮಿತವಾಗಿ ಪುಣೆಯ ಐಸಿಎಮ್‌ಆರ್ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರೋಲಾಜಿಗೆ ಕಳುಹಿಸಿ, ಕೆ ಎಫ್ ಡಿ ವೈರಸ್ ವಿರೋಧಿ ಪ್ರತಿಕಾಯಗಳನ್ನು ಪರೀಕ್ಷಿಸಲಾಗುತ್ತದೆ.
ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಹಾಗೂ ವಯಸ್ಕರ ಪೈಕಿ ಎಷ್ಟು ಮಂದಿ ಈಗಾಗಲೇ ಕೆಎಫ್‌ಡಿ ಸೋಂಕು ಹೊಂದಿದ್ದಾರೆ ಮತ್ತು ಎಷ್ಟು ಮಂದಿ ಈ ಸೋಂಕಿಗೆ ಅತಿ ಸಂಭಾವ್ಯರಾಗಿ ಉಳಿದಿದ್ದಾರೆ ಎಂಬುದನ್ನು ತಿಳಿಯುವುದಕ್ಕಾಗಿ ಐಸಿಎಂಆರ್-ಎನ್‌ಐಇ ಈ ಸಂಶೋಧನೆ ನಡೆಸುತ್ತಿದೆ. ಈ ಸೀರೋಸರ್ವೇ ಮೂಲಕ ವೈರಸ್ ಹೆಚ್ಚು ಹರಡಿರುವ ಭೌಗೋಳಿಕ ಪ್ರದೇಶಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಹಾಗು ವೈರಸ್‌ನ ಶಾಂತ ಸಂಚಾರ(ಸೈಲೆAಟ್ ಟ್ರಾನ್ಸ್ಮಿಷನ್)ನಡೆಯುತ್ತಿರುವ ಪ್ರದೇಶಗಳ ಪತ್ತೆಯೂ ಸಾಧ್ಯವಾಗುತ್ತದೆ.
ಹೆಚ್ಚಿನ ಅಪಾಯವಿರುವ ಜಿಲ್ಲೆಗಳಲ್ಲಿ ಮತ್ತು ವಯೋವರ್ಗಗಳಲ್ಲಿ ಲಸಿಕಾಕರಣವನ್ನು ಆದ್ಯತೆಯಾಗಿಸಲು ಈ ಮಾಹಿತಿಯು ಸಹಾಯ ಮಾಡುತ್ತದೆ. ಜೊತೆಗೆ, ಈ ಅಧ್ಯಯನದಿಂದ ದೊರೆಯುವ ಸಾಕ್ಷ್ಯಾಧಾರಗಳು ರೋಗದ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಕರಿಸುತ್ತದೆ ಹಾಗೂ ಇದರಿಂದ ಪ್ರಭಾವಿತ ಪ್ರದೇಶಗಳಲ್ಲಿ ರೋಗವನ್ನು ಬೇಗನೆ ಪತ್ತೆ ಹಚ್ಚುವುದು ಸುಲಭವಾಗುತ್ತದೆ.
ಇತ್ತೀಚೆಗೆ ಈ ಸಮೀಕ್ಷೆಯ ಕುರಿತಂತೆ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಎಪಿಡೆಮಿಯಾಲಜಿ , ಐ ಸಿ ಎಮ್ ಆರ್ ನ ನಿರ್ದೇಶಕರಾದ ಡಾ. ಮನೋಜ್ ಮುರೇಕರ್ ಇವರ ನೇತೃತ್ವದಲ್ಲಿ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯಾಗಾರವನ್ನು ನಡೆಸಲಾಯಿತು. ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ಬಾಲು ಪಿ ಎಸ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಡಾ.ಲತಾ ಆರ್ ತೆಲಂಗ್, ಪ್ರಾಂಶುಪಾಲರಾದ ಡಾ.ಸಿದ್ದಲಿಂಗಪ್ಪ, ಡೀನ್ ಡಾ.ವಿನಾಯಕ್ ಮುಂತಾದವರು ಉಪಸ್ಥಿತರಿದ್ದರು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ತಿಳಿಸಿದ್ದಾರೆ.