ಬೆಂಗಳೂರು : ಕೇಂದ್ರ ಸರ್ಕಾರ ಮನ್ರೇಗಾ ಯೋಜನೆ ಹೆಸರು ಬದಲಾವಣೆ ಮಾಡಿದಕ್ಕೆ ಆಹಾರ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಕೇಂದ್ರ ಸರ್ಕಾರ ಹಾಗು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಯಾರಿಗೆ ಗೊತ್ತಿಲ್ಲ ರಾಮ, ನೀವು ಎಷ್ಟು ಜನ ಬರೆಯುತ್ತಿರ ರಾಮ ಕೋಟಿ? ನಾನು ನಿತ್ಯ ರಾಮ ಕೋಟಿ ಬರೆಯುತ್ತೇನೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ಮನ್ರೇಗಾ ಯೋಜನೆ ಹೆಸರು ಬದಲಾವಣೆ ಮಾಡಿದ್ದು ಒಂದು ದುರಂತ. ಗಾಂಧೀಜಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ. ರಾಮ ಯಾರಿಗೂ ಬೇಡ ಅಂತ ಹೇಳಲ್ಲ. ಮನೆಯಲ್ಲಿ ರಾಮನಿಗೂ ಆಂಜನೇಯನಿಗೂ ಪೂಜೆ ಮಾಡುತ್ತೇವೆ. ಸಮಾಜ ಸುಧಾರಣೆ, ಸಮಾನತೆ ಉದ್ದೇಶದಿಂದ ಗಾಂಧಿ ಹೆಸರಿಟ್ಟಿದ್ದೆವು.
ಡಾ.ಮನಮೋಹನ್ ಸಿಂಗ್ ಸರ್ಕಾರದಲ್ಲಿ ಮನ್ರೇಗಾ ಯೋಜನೆ ಜಾರಿಗೋಳಿಸಿದ್ದೆವು. ಇದನ್ನ ಇಡೀ ದೇಶ ಒಪ್ಪಿತ್ತು. ಇದೀಗ ಆ ಹೆಸರು ಬದಲಾವಣೆಯಿಂದ ಪ್ರಧಾನಿ ನರೇಂದ್ರ ಮೋದಿಗೆ ಗೌರವ ಕಡಿಮೆ ಆಯಿತು. ಕಳಂಕ ಬಂತು. ರಾಷ್ಟ್ರಪಿತನ ಹೆಸರು ಬದಲಾಯಿಸಿ ನೀವು ಕಿರೀಟ ಇಟ್ಟುಕೊಳ್ಳುತ್ತಿರಾ? ಯಾರಿಗೆ ಗೊತ್ತಿಲ್ಲ ರಾಮ, ನೀವು ಎಷ್ಟು ಜನ ಬರೆಯುತ್ತಿರ ರಾಮ ಕೋಟಿ? ನಾನು ನಿತ್ಯ ರಾಮ ಕೋಟಿ ಬರೆಯುತ್ತೇನೆ ನೀವು ಮತ ಪಡೆಯಲು ಶ್ರೀರಾಮನ ಹೆಸರು ಬಳಸಿಕೊಳ್ಳಬೇಡಿ. ಯೋಜನೆಗೆ ಗಾಂಧೀಜಿ ಹೆಸರು ಬದಲಾಯಿಸಿದಕ್ಕೆ ನಮಗೆಲ್ಲ ನೋವಿದೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.








