ದಾವಣಗೆರೆ : ಸ್ವಪಕ್ಷದ ವಿರುದ್ಧವೇ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಕುರಿತು ಪಕ್ಷ ವಿರೋಧಿ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಕೇಂದ್ರೀಯ ಬಿಜೆಪಿ ಎಷ್ಟು ಸಮಿತಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಈ ವಿಚಾರವಾಗಿ ಶಾಸಕ ಯತ್ನಾಳ್ ಇದೀಗ ಮತ್ತೆ ಸ್ವಪಕ್ಷದ ವಿರುದ್ಧವೇ ಗುಡುಗಿದ್ದು ನಾನು ಯಾವುದೇ ರೀತಿಯಾಗಿ ಕ್ಷಮೆಯನ್ನು ಕೇಳಲ್ಲ ಪತ್ರಾನು ಬರೆಯಲ್ಲ ಎಂದು ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ಒಬ್ಬ ಹೇಳುತ್ತಾನೆ, ಯತ್ನಾಳರನ್ನು ಶಾಶ್ವತವಾಗಿ ಹೊರಹಾಕಿದ್ದೇನೆ ಅಂತಾ ಹೇಳ್ತಾನೆ. ಬಿಜೆಪಿ ಏನು ಅವರ ಅಪ್ಪನದ್ದ ಪಕ್ಷದಿಂದ ಹೊರ ಹಾಕುವುದಕ್ಕೆ? ಎಂತೆಂಥ ಕಳ್ಳ ನನ್ ಮಕ್ಕಳನ್ನು ಬಿಜೆಪಿಗೆ ಕರೆದುಕೊಂಡಿದ್ದಾರೆ. ನಾನೇನು ಅಂತ ತಪ್ಪು ಮಾಡಿದ್ದೇನೆ? ಡಿಕೆ ಶಿವಕುಮಾರ್ ಜೊತೆಗೆ ಒಳಗಿಂದೊಳಗೆ ಸರಕಾರ ನಡೆಸಲು ಮೀಟಿಂಗ್ ನಡೆಸಿದರು. ಒಳಗೊಳಗೆ ಸರ್ಕಾರ ನಡೆಸಲು ದೆಹಲಿಯಲ್ಲಿ ಸಭೆ ಮಾಡಿಲ್ವಾ? ಅಂತಹ ಭ್ರಷ್ಟರನ್ನೇ ತೆಗೆದುಕೊಂಡಾಗ ನಾನೇನು ಮಾಡಿದ್ದೇನೆ? ನಾನು ಕ್ಷಮೆ ಕೇಳೋದಿಲ್ಲ ಪತ್ರ ಕೂಡ ಬರೆಯುವುದಿಲ್ಲ. ನಾನು ಕೈಕಟ್ಟಿ ಕೂರುವುದಿಲ್ಲ ಎಂದು ಗುಡುಗಿದರು.