ತುಮಕೂರು : ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ಕೂಡಲೇ ರಾಜೀನಾಮೆ ನೀಡಿದರು. ಈಗ ಈ ವಿಚಾರವಾಗಿ ಸಚಿವ ರಾಜಣ್ಣ ಅವರು, ನಾನು ದೆಹಲಿಗೆ ತೆರಳುತ್ತಿದ್ದೇನೆ ಅಲ್ಲಿಂದ ಬಂದ ನಂತರ ಸಿಹಿ ಸುದ್ದಿ ನೀಡುತ್ತೇನೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಶಾಸಕ ಎನ್ ರಾಜಣ್ಣ ಹೇಳಿಕೆ ನೀಡಿದ್ದು, ನನ್ನ ಸಚಿವ ಸ್ಥಾನ ತೆಗೆಯುವುದು ಮುಖ್ಯಮಂತ್ರಿಗೆ ಗೊತ್ತಿರಲಿಲ್ಲ. ಮೂವರು ದೆಹಲಿಯಲ್ಲಿ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮನವೊಲಿಸಲು ಯತ್ನಿಸಿದ್ದಾರೆ ಆದರೆ ಅದು ಆಗಿಲ್ಲ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾಗ ರಾಹುಲ್ ಗಾಂಧಿಯವರು ಕರೆ ಮಾಡಿದ್ದರು . ಕಾರಣ ಏನಿದೆ ಅಂತ ನನಗೆ ಗೊತ್ತಿಲ್ಲ. ಯಾವುದೇ ಸ್ಟೇಟ್ಮೆಂಟ್ ಅಂತಲ್ಲ ಸತ್ಯವನ್ನೇ ನಾನು ಹೇಳಿದ್ದೇನೆ ಎಂದರು.
ಬಿಜೆಪಿಗೆ ಬರುವಂತೆ ರಾಜಣ್ಣಗೆ ಶ್ರೀರಾಮುಲು ಆಹ್ವಾನ ವಿಚಾರವಾಗಿ ಮಾಜಿ ಸಚಿವ ಶ್ರೀರಾಮುಲು ಪ್ರೀತಿ ಮತ್ತು ವಿಶ್ವಾಸದಿಂದ ಹಾಗೆ ಹೇಳಿಕೆ ನೀಡಿರಬಹುದು. ಶ್ರೀರಾಮುಲು ಹೇಳಿದರು ಅಂತ ಬಿಜೆಪಿಗೆ ಹೋಗಲು ಆಗುತ್ತಾ? ಕಾಂಗ್ರೆಸ್ ನನಗೇನು ಕಡಿಮೆ ಮಾಡಿದೆ ಎಂದು ಕೆ.ಎನ್ ರಾಜಣ್ಣ ಪ್ರಶ್ನಿಸಿದರು. ದೆಹಲಿಗೆ ಹೋಗಿ ಬಂದ ಮೇಲೆ ಸಿಹಿ ಸುದ್ದಿ ಕೊಡುತ್ತೇನೆ. ನನಗೆ ಅಧಿಕಾರ ಕೊಟ್ಟ ಮಹದೇಶ್ವರ ಆಗಿಲ್ಲ ಸಿದ್ದರಾಮಯ್ಯ ಬಡವರ ಗುರು ಕೆಲಸ ಮಾಡುತ್ತಾರೆ ಹಾಗಾಗಿ ಖುಷಿ ಇದೆ ಎಂದರು.
ಇನ್ನೊಂದು 20 ಸೀಟು ಬಂದಿದೆ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಿದ್ದರು. ಆಗ ನರೇಂದ್ರ ಮೋದಿ ದಿನ ನಡೆಯಲ್ಲ ರಾಜಕಾರಣದಲ್ಲಿ ಏಳು ಬೀಳು ಹೊಸದಲ್ಲ ಸೋಲು ಗೆಲುವನ್ನು ಒಂದೇ ರೀತಿ ಸ್ವೀಕಾರ ಮಾಡುತ್ತೇನೆ ನಾನು ಯಾವತ್ತೂ ಸ್ವಾರ್ಥಕೋಸ್ಕರ ಸುಳ್ಳು ಹೇಳಿಲ್ಲ. ಬೇರೆಯವರ ಅನುಕೂಲಕ್ಕಾಗಿ ಸುಳ್ಳು ಹೇಳುತ್ತೇನೆ ನಿಮಗೆ ಅಧಿಕಾರ ಇಲ್ಲದಿದ್ದರೂ ಪರವಾಗಿಲ್ಲ ಜನರ ಪ್ರೀತಿ ಉಳಿಸಿಕೊಂಡಿರುವ ಶಕ್ತಿ ದೇವರು ಕೊಡಲಿ ಸಮಯ ಬಂದಾಗ ಸಚಿವ ಸ್ಥಾನವನ್ನು ಪಡೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.