ತುಮಕೂರು : ರಾಜ್ಯದಲ್ಲಿ ಸದ್ಯ ಹಾನಿ ಟ್ರ್ಯಾಪ್ ಭಾರಿ ಸುದ್ದಿಯಾಗುತ್ತಿದ್ದು, ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಶಾಸಕ ಯತ್ನಾಳ್ ಆರೋಪ ಮಾಡಿದ ಮೇಲೆ ಹಲವು ಬೆಳವಣಿಗೆ ನಡೆದಿದ್ದವು. ಇದೀಗ ಸಚಿವ ರಾಜಣ್ಣ ಪುತ್ರ ರಾಜೇಂದ್ರ ಅವರು ಸಹ ನನಗೂ ವೀಡಿಯೋ ಕಾಲ್ ಮೂಲಕ ಹನಿಟ್ರ‍್ಯಾಪ್ ಮಾಡಲು ಪ್ರಯತ್ನಿಸಿದ್ದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ತುಮಕೂರಲ್ಲಿ ಮಾತನಾಡಿದ ಅವರು, ಸಚಿವ ರಾಜಣ್ಣ ಅವರನ್ನ ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಲೇಡಿ ಸೇರಿ ಮೂರ್ನಾಲ್ಕು ಜನ ಪ್ರಯತ್ನ ಮಾಡಿದ್ದಾರೆ.ಈ ಬಗ್ಗೆ ಹೈಕಮಾಂಡ್‌ಗೆ ದೂರು ಕೊಡುತ್ತೇನೆ. 3-4 ದಿನ ಬಿಟ್ಟು ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಹೇಳುತ್ತೇವೆ ಎಂದು ಅವರು ತಿಳಿಸಿದರು.
ನನಗೂ ಫೋನ್ ಕಾಲ್ ಹಾಗೂ ವೀಡಿಯೋ ಕಾಲ್ ಮೂಲಕ ಟ್ರ‍್ಯಾಪ್ ಮಾಡಲು ಪ್ರಯತ್ನ ಮಾಡಿದ್ದರು. ಆ ಎಲ್ಲಾ ನಂಬರ್ ಹಾಗೂ ಕಾಲ್ ಡೀಟೆಲ್ಸ್ ನನ್ನ ಬಳಿ ಇದೆ. ಡಿಜಿಗೆ ಈ ಮೂಲಕ ದೂರು ಕೊಡುತ್ತೇನೆ. ಜೊತೆಗೆ ರಾಜಣ್ಣರಿಗೆ ಲೇಡಿ ಸಹಿತ ಮೂರ್ನಾಲ್ಕು ಜನ ಬಂದು ಬಲೆಗೆ ಬೀಳಿಸಲು ಪ್ರಯತ್ನ ಮಾಡಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.