ಬಾಗಲಕೋಟೆ : ವಿಜಯಪುರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಕಷ್ಟಪಟ್ಟು ಪಕ್ಷ ಬೆಳೆಸಿದ್ದು ನಾನು ಆದರೆ ಎಸ್ಎಂ ಕೃಷ್ಣ ಮುಖ್ಯಮಂತ್ರಿ ಆದರೆ ಎಂದು ಬೇಸರ ಹೊರ ಹಾಕಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ವಿರಪ್ಪ ಮೋಹಿನಿ ಸಹ ನಾನು 1980 ರಲ್ಲಿ ಮುಖ್ಯಮಂತ್ರಿ ಆಗಬೇಕಿತ್ತು ಆದರೆ ಆಗಲಿಲ್ಲ ಹಾಗಂತ ನಾನು ಯಾವುದೇ ಕಾರಣಕ್ಕೂ ಪಶ್ಚಾತಾಪ ಪಡಲಿಲ್ಲ ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಷ್ಟು ವರ್ಷ ಮುಖ್ಯಮಂತ್ರಿ ಆಗಿದ್ದೇನೆ ಅನ್ನೋದು ಮುಖ್ಯವಲ್ಲ. ಸಿಎಂ ಆಗಿದ್ದವರಿಗೆ ಮುಂದುವರಿಯಬೇಕೆಂಬ ಆಸೆ ಇರುತ್ತದೆ. 1979-1995 ರವರೆಗೆ ಪಕ್ಷದ ಸಂಘಟನೆಯಲ್ಲಿ ನಾನೇ ಕಾರ್ಯನಿರ್ವಹಿಸಿದ್ದೇನೆ. ಆದರೆ ಆಗ ಆರ್ ಗುಂಡುರಾವ್ ಸಿಎಂ ಆದರು. ಗುಂಡು ರಾವ್ ಬಳಿಕ ಎಸ್ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದರು. ಅದಕ್ಕಿಂತ ಮೊದಲು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದರು.
ಆಗ ನಾನು ಮುಖ್ಯಮಂತ್ರಿ ಆಗಲಿಲ್ಲ ಅಂತ ಪಶ್ಚಾತಾಪಪಡಲಿಲ್ಲ. ನಮಗೆ ಅರ್ಹತೆ ಇದ್ದರೆ ಸರದಿ ಬಂದರೆ ಸಿಎಂ ಆಗೇ ಆಗುತ್ತೇವೆ. 1980 ರಲ್ಲಿ ನಾನು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಆಗಲಿಲ್ಲ. ಸಿಎಂ ಆಗಲು ನಾನು ಹತ್ತು ವರ್ಷಗಳ ಕಾಲ ಕಾದಿದ್ದೇನೆ. ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಅಂತ ಹೇಳಲಿಕ್ಕೆ ಆಗುವುದಿಲ್ಲ. ಎಂದು ಬಾಗಲಕೋಟೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದರು.