ಮಂಡ್ಯ : ಇಂದು ಮಂಡ್ಯಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು. ಮಂಡ್ಯದ ಮೈಷುಗರ್ ಶಾಲೆಗೆ ಆಗಮಿಸಿ, ಶಾಲೆಯ ಆಡಳಿತ ಮಂಡಳಿ ಜೊತೆ ಸಭೆ ನಡೆಸಲಿದ್ದಾರೆ. ಶಾಲೆಯ ಶಿಕ್ಷಕರಿಗೆ ಸಂಬಳ ಕೊಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿರುವ ಶಾಲೆ. ಈ ಬಗ್ಗೆ 25 ಕೋಟಿ ಹಣ ಡೆಪಸಿಟ್ ಇಡುವುದಾಗಿ ಹೆಚ್.ಡಿ.ಕೆ. ಈ ಹಿಂದೆ ಹೇಳಿದ್ದರು.
ಹಾಗಾಗಿ ಇಂದು ನಡೆಯುವ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಮಂಡ್ಯದ ಮೈಶುಗರ್ ಶಾಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಷಣ ಮಾಡಿದರು. ನನ್ನ ಬಗ್ಗೆ ಸಣ್ಣ ತನದ ಮಾತುಗಳನ್ನಾಡುತ್ತಿದ್ದಾರೆ. ಶಾಲಾ ಶಿಕ್ಷಕರ ಸಂಬಳಕ್ಕೆ ಹಣ ಕೊಡ್ತೀನಿ ಎಂದು ಕೊಟ್ಟಿಲ್ಲ ಅಂತಿದ್ದಾರೆ. ಸಿಎಸ್ಆರ್ ಫಂಢ್ ನಲ್ಲಿ ಸಂಬಳ ಕೊಡಲು ಆಗಲ್ಲ. ನನಗೆ ಬರುವ ಸಂಬಳವನ್ನ ಶಿಕ್ಷಕರಿಗೆ ಕೊಡುವ ತೀರ್ಮಾನ ಮಾಡಿದ್ದೇನೆ. ಅದು ಪಾಪದ ಹಣ ಅಲ್ಲ ಎಂದು ತಿಳಿಸಿದರು.
ನಾನು ವರ್ಗಾವಣೆಗೆ ಯಾರಿಂದಲೂ ದುಡ್ಡು ಪಡೆಯಲ್ಲ, ಕಮಿಷನ್ ಪಡೆದಿಲ್ಲ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ.ಜನರಿಗೆ ದ್ರೋಹ ಮಾಡುವವನು ನಾನು ಅಲ್ಲ. ನಾನು ಈ ಶಾಲೆಯನ್ನ ದತ್ತು ಪಡೆಯುತ್ತೇನೆ ಎಂದಿದ್ದೀನಿ. ಕೇವಲ ಇದೊಂದೆ ಶಾಲೆ ಅಭಿವೃದ್ದಿ ಮಾಡ್ತಿಲ್ಲ. ರಾಜ್ಯದ 75 ಶಾಲೆಗಳ ನವೀಕರಣಕ್ಕೆ ಹಣದ ವ್ಯವಸ್ಥೆ ಮಾಡಿದ್ದೇನೆ. ಒಂದು ವರ್ಷದಲ್ಲಿ ಜಿಲ್ಲೆ ಅಭಿವೃದ್ದಿಗೆ 34 ಕೋಟಿ ಸಿಎಸ್ಆರ್ ಪಂಢ್ ತಂದಿದ್ದೇನೆ. ಇದೇ ವರ್ಷ 30 ರಿಂದ 50 ಕೋಟಿ ಪಂಢ್ ತರಲು ತೀರ್ಮಾನಿಸಿದ್ದೇನೆ.
ಮೈಶುಗರ್ ಶಾಲೆಯ ಶಿಕ್ಷಕರಿಗೆ 13 ತಿಂಗಳ 26 ಲಕ್ಷ ಬಾಕಿ ಉಳಿಸಿಕೊಳ್ಳಲಾಗಿದೆ. ಶಿಕ್ಷಕ ಸಂಬಳವನ್ನ ನನ್ನ ಸಂಬಳದ ಹಣದಿಂದ ಕೊಡುತ್ತೇನೆ. ರಾತ್ರೋ ರಾತ್ರಿ ಹಣ ತಂದು ಕೊಡಲು ಸಾಧ್ಯವಿಲ್ಲ. ಜಿಲ್ಲೆ ಅಭಿವೃದ್ದಿಗೆ ನಾನು ಬದ್ಧನಿದ್ದೇನೆ. ಜಿಲ್ಲೆಯ ಜನರಿಗೆ ಅನ್ಯಾಯ ಮಾಡಲ್ಲ. ಯಾರದ್ದೋ ಜೊತೆ ನಾನು ಕೂತು ಚರ್ಚೆ ಮಾಡಲ್ಲ. ಇಲ್ಲಿನ ಟ್ರಸ್ಟಿಗಳಿದ್ದಾರೆ ಅವರೊಂದಿಗೆ ಚರ್ಚೆ ಮಾಡ್ತೇನೆ. ಚರ್ಚೆ ಮಾಡಿ ಮೈಶುಗರ್ ಶಾಲೆ ಉಳಿಸುವ ನಿಟ್ಟಿನ ಪ್ರಯತ್ನಿಸುತ್ತೇನೆ. ಜಿಲ್ಲೆಗೆ ಕಾರ್ಖಾನೆ ತರಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.








