ಮೈಸೂರು : ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ. ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರುತ್ತಾರೋ ಗೊತ್ತಿಲ್ಲ. ಇನ್ನು ಮುಂದಾದರು ಖಡಕ್ ಆಗಿ ಕೆಲಸ ಮಾಡಬೇಕು ಎಂದು ಮೈಸೂರಿನಲ್ಲಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುಂಡ ಮುಸ್ಲಿಮರು ನಿನ್ನೆ ಆಕ್ರಮಣ ಮಾಡಿದ್ದಾರೆ. ಪೊಲೀಸರನೇ ಗುರಿಯಾಗಿಸಿ ಇಲ್ಲಿ ಯಾವಾಗಲೂ ದಾಳಿ ಆಗುತ್ತದೆ. ಟಿಪ್ಪು ಸಂತತಿಯವರು ಮಾಡಿರುವ ಗಲಾಟೆ ಇದು. ಸಿಎಂ ಸಿದ್ದರಾಮಯ್ಯ ಆಡಳಿತ ಹೇಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಪೊಲೀಸರು ಸರ್ಕಾರದ ಹಣತೆ ನಡೆಯುವುದನ್ನು ಬಿಡಬೇಕು. ಪುಂಡ ಮುಸ್ಲಿಮರಿಗೆ ಸಿದ್ದರಾಮಯ್ಯ ಫ್ರೀ ಬಿಟ್ಟಿದ್ದಕ್ಕೆ ಈ ರೀತಿ ಗಲಾಟೆ ಆಗಿದೆ. ಕೇಜ್ರಿವಾಲ್ ಸೋತರೆ ಉದಯಗಿರಿ ಮುಸ್ಲಿಮರಿಗೆ ಯಾಕೆ ರೋಷ ಬರುತ್ತದೆ? ಕೇಜ್ರಿವಾಲ್ ಸೋತರೆ ಅವರ ಮನೆಯಲ್ಲಿ ಏಕೆ ಸೂತಕ ಬರುತ್ತದೆ? ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಉದಯಗಿರಿ ವ್ಯಾಪ್ತಿಯಲ್ಲಿ ಪೊಲೀಸರು ಕೊಂಬಿಂಗ್ ಮಾಡಬೇಕು. ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರುತ್ತಾರೋ ಗೊತ್ತಿಲ್ಲ ಈಗಲಾದರೂ ಖಡಕ್ಕಾಗಿ ಸಿದ್ದರಾಮಯ್ಯ ಕೆಲಸ ಮಾಡಬೇಕು ಸಿದ್ದರಾಮಯ್ಯ ಎಷ್ಟು ಅಸಮರ್ಥ ಮುಖ್ಯಮಂತ್ರಿ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಸಿದ್ದರಾಮಯ್ಯ ಅವರೇ ನಿಮ್ಮ ಕೈಯಲ್ಲಿ ಅಂತೂ ಆಗುವುದಿಲ್ಲ ಈಗಲಾದರೂ ಒಂದು ವಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ ಉದಯಗಿರಿ ಪುಂಡರನ್ನು ಕ್ಲೀನ್ ಮಾಡುವ ಕೆಲಸ ಮಾಡುತ್ತಾರೆ ಎಂದು ಮೈಸೂರಿನಲ್ಲಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.