ಬೆಂಗಳೂರು : ನಾನು ದುರಹಂಕಾರಿ ಅಲ್ಲ ಸ್ವಾಭಿಮಾನಿ ಅಷ್ಟೇ ಎಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ನಿಮ್ಮ ಮಕ್ಕಳನ್ನು ಅವಿದ್ಯವಂತರಾಗಲು ಬಿಡಬೇಡಿ ವಿದ್ಯೆ ಇದ್ದರೆ ಮಾತ್ರ ಸ್ವಾಭಿಮಾನ ಬೆಳೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಗುಲಾಮಗಿರಿ ಮನೆ ಮಾಡಿಕೊಳ್ಳುತ್ತದೆ ಎಂದು ವೀರೇಂದ್ರ ಕೇಶವ ತಾರಕಾನಂದಪುರಿಶ್ರೀ ಪುಣ್ಯಾರಾಧನೆ ಸ್ಮರಣಾರ್ಥ ಭಕ್ತರ ಭಂಡಾರದ ಕುಟಿಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೇಲ್ಜಾತಿಯ ಬಡವ ಬಂದರೆ ಗೌರವ ಕೊಡುತ್ತೇವೆ. ಕೆಲವರ್ಗದ ಶ್ರೀಮಂತ ಬಂದರೆ ಅವರನ್ನು ಕೀಳಾಗಿ ಕಾಣುತ್ತೇವೆ. ಸ್ವಾಭಿಮಾನಿಗಳಾಗಿ ಬದುಕುವುದು ದುರಹಂಕಾರ ಅಲ್ಲ. ನನ್ನ ನೋಡಿದರೆ ದುರಹಂಕಾರಿ ಅಂತಾರೆ ನಾನು ಸ್ವಾಭಿಮಾನಿ ದುರಹಂಕಾರಿ ಅಂತ ಯಾರೇ ಕರೆದರೂ ನಾನು ಅದಕ್ಕೆ ಸೊಪ್ಪು ಹಾಕಲ್ಲ ವಿರೋಧ ಮಾಡುವವರು ಸತ್ಯಕ್ಕೆ ಹತ್ತಿರವಾಗಿರಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.