ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಆರ್ಎಸ್ಎಸ್ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಜಟಾಪಟಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀವು ಯಾರು RSS ನವರಲ್ಲ ನಿಮ್ಮನ್ನು ಎತ್ತಿ ಕಟ್ಟಿದ್ದಾರೆ. ನಿಮಗೂ ಆರ್ ಎಸ್ ಎಸ್ ನವರಿಗೆ ನಾನು ಹೆದರಲ್ಲ ಅಂದಾಗ ಬಿಜೆಪಿ ನಾಯಕರು ನಾವು ಆರ್ ಎಸ್ ಎಸ್ ನವರೇ ಎಂದು ಕಿಡಿ ಕಾರಿದರು.
ಕಲಾಪ ಆರಂಭವಾದ ವೇಳೆ ಈ ಒಂದು ಜಟಾಪಟಿ ನಡೆಯಿತು.ನಿಮಗೂ ಆರ್ಎಸ್ಎಸ್ ನವರಿಗೂ ನಾನು ಹೆದರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದಾಗ, ನೀವು ನಾಲಾಯಕಗಳು, ಯೋಗ್ಯತೆ ಇಲ್ಲ ಎಂದು ಆರ್ ಅಶೋಕ್ ಕಿಡಿ ಕಾರಿದ್ದಾರೆ. ನಿಮ್ಮೆಲ್ಲರನ್ನು ಎತ್ತಿ ಕಟ್ಟಿದ್ದಾರೆ, ನಿಂತುಕೊಳ್ಳಿ, ನೀವು ಆರ್ ಎಸ್ ಎಸ್ ನವರು ಅಲ್ಲವೇ ಅಲ್ಲ ಎಂದು ಹೇಳಿದಾಗ ನಾವು ಆರ್ ಎಸ್ ಎಸ್ ನವರೇ ಎಂದು ಬಿಜೆಪಿ ಶಾಸಕರು ವಾದ ಮಾಡಿದರು.
ಕಾಂಗ್ರೆಸ್ನವರು ಪಿಎಫ್‌ಐ ಏಜೆಂಟರು. ಪಾಕಿಸ್ತಾನ ಪಿಎಫ್ಐ ಹೇಳಿದಂಗೆ ಮಾಡೋರು ನೀವು ಎಂದು ಬಿಜೆಪಿ ಕಿಡಿಕಾರಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಆರ್ ಎಸ್ ಎಸ್ ನವರು ನಮ್ಮ ವೈರಿಗಳು.ಸಮುದಾಯಗಳ ನಡುವೆ ದ್ವೇಷ ತಂದವರು ನೀವು. ವಿಷಬೀಜ ಬಿತ್ತುವವರು ನೀವು. ಎಲ್ಲದಕ್ಕೂ ರೆಡಿಯಾಗಿದ್ದೇವೆ. ಆರ್ ಎಸ್ ಎಸ್ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.