ಕೊಪ್ಪಳ : ಕಳೆದ 2 ದಿನಗಳ ಹಿಂದೆ ಶಿವರಾಜ್ ತಂಗಡಿಗಿ ಶಾಲೆಯೊಂದರಲ್ಲಿ ತಪ್ಪಾಗಿ ಕನ್ನಡ ಬರೆದಿದ್ದ ವಿಚಾರವಾಗಿ, ಕನ್ನಡ ಬರೆಯಲು ಬರಲ್ಲ ಎಂಬ ವೈರಲ್ ಆದ ವಿಡಿಯೋ ವಿಚಾರವಾಗಿ ಶಿವರಾಜ್ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ನಾನು ಬಿಎಸ್ಸಿ ಪದವೀಧರ ಕನ್ನಡ ಬರೆಯಲು ಬಾರದಷ್ಟು ದಡ್ಡ ನಾನಲ್ಲ. ಪೂರ್ತಿ ಬರುವವರಿಗೆ ಕಾಯುವ ತಾಳ್ಮೆ ಇಲ್ಲದವರಿಂದ ವಿಡಿಯೋ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೂಳೆಕಲ್ ಎಂಬ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಬೇರೆ ಏನೋ ಬರೆಯಲು ಮುಂದಾಗಿದ್ದೆ. ಆದರೆ ಅಲ್ಲಿದ್ದವರು ಶುಭವಾಗಲಿ ಅಂತ ಬರೆಯಲು ಹೇಳಿದ್ದರು ಆಗ ಭ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿತ್ತು. ಆದರೆ ಅಕ್ಷರ ಬರೆಯಲಾರದ ಸ್ಥಿತಿಯಲ್ಲಿ ನಾನಿಲ್ಲ. ನನ್ನ ಬಗ್ಗೆ ಮಾತನಾಡುವವರು ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ.ಎಂದು ಎಚ್ಚರಿಸದರು.
ಕಳೆದ 12 ವರ್ಷಗಳಿಂದ ನಾನು ರಾಜಕೀಯದಲ್ಲಿ ಇದ್ದೇನೆ. ಯಾವತ್ತಾದರೂ ತಪ್ಪಾಗಿ ಕನ್ನಡ ಮಾತನಾಡಿದ್ದೀನಾ? ಕಳೆದ ಎರಡು ವರ್ಷ ಇಲಾಖೆ ಹೇಗಿದೆ ಅಂತ ನೋಡಿ ನನ್ನ ಕಾರ್ಯ ನಿರ್ವಹಣೆಗೆ ಸಾಹಿತಿಗಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸುಳೆಕಲ್ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿಗೆ ಹೇಳಿಕೆ ನೀಡಿದರು.