ಬೆಳಗಾವಿ : ಪರಸ್ತ್ರೀ ಜೊತೆಗೆ ಓಡಿ ಹೋಗಿದ್ದ ಪತಿಯು ಕೊನೆಗೂ ಸಿಗಿ ಬಿದ್ದಿದ್ದಾನೆ ಈ ವೇಳೆ ಪತ್ನಿಯಾಗು ಪರಸ್ತ್ರೀ ನಡುವೆ ಗಲಾಟೆ ನಡೆದು ರಸ್ತೆಯಲ್ಲಿಯೇ ಪರಸ್ಪರ ಜೊತೆ ಹಿಡಿದುಕೊಂಡು ಹೊಡೆದಾಡಿಕೊಂಡಿರುವ ಘಟನೆ ಬೆಳಗಾವಿಯ ಕೊಲ್ಲಾಪುರ ಸರ್ಕಲ್ ಬಳಿ ಈ ಒಂದು ಘಟನೆ ನಡೆದಿದೆ.
ಬೆಳಗಾವಿಯಲ್ಲಿ ರಸ್ತೆಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು. ಬೆಳಗಾವಿ ನಗರದ ಕೊಲ್ಲಾಪುರ ಸರ್ಕಲ್ ನಲ್ಲಿ ಈ ಒಂದು ಘಟನೆ ನಡೆದಿದೆ.ಕೆಲವು ದಿನಗಳ ಹಿಂದೆ ಪರಸ್ತ್ರೀ ಜೊತೆಗೆ ಗ್ರಾಮ ಪಂಚಾಯಿತಿಯ ಸದಸ್ಯೆಯ ಪತಿ ಓಡಿ ಹೋಗಿದ್ದ. ಎರಡು ಮಕ್ಕಳನ್ನು ಬಿಟ್ಟು ಮಹಿಳೆಯ ಜೊತೆಗೆ ಬಸವರಾಜ ಸೀತಾಮಣಿ ಎನ್ನುವ ವ್ಯಕ್ತಿ ಓಡಿ ಹೋಗಿದ್ದ. ಮಾರಿಹಾಳದ ಮಾಸಾಬಿ ಸೈಯದ್ ಜೊತೆಗೆ ಬಸವರಾಜ್ ಓಡಿ ಹೋಗಿದ್ದ.
ಗಂಡ ಹೊಡಿ ಹೋದ ಬಳಿಕ ವಾಣಿಶ್ರೀ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮಕ್ಕಳನ್ನು ಕಟ್ಟಿಕೊಂಡು ಜೀವನ ಮಾಡಲು ವಾಣಿಶ್ರೀ ಹರಸಾಹಸ ಪಡುತ್ತಿದ್ದರು ಎರಡು ತಿಂಗಳು ಬಳಿಕ ಬೆಳಗಾವಿಗೆ ಬಂದು ಮಾಸಾಬಿ ಹಾಗೂ ಬಸವರಾಜ್ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ವಾಣಿಶ್ರೀ ಕೈಗೆ ಮಾಸಾಬಿ ಮತ್ತು ಬಸವರಾಜು ಸಿಕ್ಕಿಬಿದ್ದಿದ್ದಾರೆ.
ಈ ಸಂದರ್ಭದಲ್ಲಿ ಮಸಾಬಿಗೆ ವಾಣಿಶ್ರೀ ಪ್ರಶ್ನಿಸಿದ್ದಾರೆ. ಪ್ರಶ್ನೆ ಮಾಡುತ್ತಿದ್ದಂತೆ ವಾಣಿಶ್ರೀ ಮೇಲೆ ಹಲ್ಲೆ ನಡೆಸಲಾಗಿದೆ. ಜುಟ್ಟು ಹಿಡಿದು ಮಾಸಾಬಿ ಹಾಗೂ ವಾಣಿಶ್ರೀ ನಡು ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಸವರಾಜ ಸೀತಿಮನೆಯಿಂದಲೂ ಕೂಡ ಹೆಂಡತಿ ವಾಣಿಶ್ರೀ ಮೇಲೆ ಹಲ್ಲೆ ನಡೆದಿದ್ದು, ಹೊಡೆದಾಡಿಕೊಳ್ಳುತ್ತಿದ್ದನ್ನು ಕಂಡು ಸ್ಥಳೀಯರು ಬಿಡಿಸಿ ಕಳುಹಿಸಿದ್ದಾರೆ.