ದಾವಣಗೆರೆ : ಪತ್ನಿ ಮದುವೆಯಾದ 45 ದಿನದಲ್ಲಿ ಬೇರೆ ಯುವಕನೊಂದಿಗೆ ಓಡಿ ಹೋಗಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿತ್ತು. ಈ ವಿಚಾರ ತಿಳಿದು ಮುಂದೆ ನಿಂತು ಮದುವೆ ಮಾಡಿಸಿದ್ದ, ಯುವತಿಯ ಸೋದರ ಮಾವ ಕೂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ.
ಸರಸ್ವತಿಯ ಪತಿ ಹರೀಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಚಾರ ತಿಳಿದು ಪತ್ನಿ ಸರಸ್ವತಿಯ ಸೋದರ ಮಾವ ರುದ್ರೇಶ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿ ಸರಸ್ವತಿಯನ್ನು ಪೋಲಿಸರು ಬಂಧಿಸಿದ್ದಾರೆ. ದಾವಣಗೆರೆಯ ಎಲೆಬೇತೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಇದ್ದ ಪತ್ನಿ ಸರಸ್ವತಿಯನ್ನು ಬಂಧಿಸಿ ಪೋಲಿಸರು ಗ್ರಾಮಾಂತರ ಠಾಣೆಗೆ ಕರೆ ತಂದಿದ್ದಾರೆ.
ಇನ್ನು ತಲೆಮರಿಸಿಕೊಂಡಿರುವ ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ. ಸರಸ್ವತಿ ಪ್ರಿಯಕರ ಶಿವಕುಮಾರ್, ಸೋದರ ಮಾವ ಗಣೇಶ್, ಸರಸ್ವತಿ ಚಿಕ್ಕಮ್ಮ ಅಂಜಿನಮ್ಮ ನಾಪತ್ತೆಯಾಗಿದ್ದು, ಇವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಸರಸ್ವತಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆತರುತ್ತಿದ್ದಂತೆ ದಾವಣಗೆರೆ ಗ್ರಾಮಾಂತರ ಠಾಣೆ ಮುಂದೆ ಹರೀಶ್ ಸಂಬಂಧಿಕರು ಜಮಾಯಿಸಿದ್ದರು. ಹರೀಶ್ ಡೆತ್ ನೋಟ್ ನಲ್ಲಿ ಬರೆದಿರುವಂತೆ ಅವರಿಗೆ ಶಿಕ್ಷೆ ನೀಡಬೇಕು ಎಂದು ಸಂಬಂಧಿಕರು ಒತ್ತಾಯಿಸಿದರು.
ಪ್ರಕರಣದ ಹಿನ್ನೆಲೆ
ಪತ್ನಿ ಪರಾರಿಯಾಗಿದ್ದರಿಂದ ಮನನೊಂದು ಆಕೆಯ ಪತಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದಲ್ಲಿ ನಡೆದಿತ್ತು. ಅತ್ತ ತಾನು ಮಾಡಿಸಿದ ಮದುವೆ ಹೀಗಾಯಿತಲ್ಲ ಎಂದು ಪತ್ನಿಯ ಸೋದರ ಮಾವ ಕೂಡ ವಿಷ ಸೇವಿಸಿ
ಕೊನೆಯುಸಿರೆಳೆದಿದ್ದರು. ಎರಡೂವರೆ ತಿಂಗಳ ಹಿಂದೆಯಷ್ಟೇ ಆನೆಕೊಂಡ ಗ್ರಾಮದ ಸರಸ್ಪತಿಯನ್ನು ಹರೀಶ್ ವಿವಾಹವಾಗಿದ್ದರು.
ಮದುವೆ ಆಗಿ ಎರಡೂವರೆ ತಿಂಗಳ ಬಳಿಕ ಸರಸ್ವತಿ ದೇವಾಲಯಕ್ಕೆ ಹೋಗಿಬರುತ್ತೇನೆಂದು ಹೋದವಳು ಕುಮಾರ್ ಎಂಬುವನೊಂದಿಗೆ ಪರಾರಿಯಾಗಿದ್ದಳು ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಆಕೆಯ ಪತಿ ಹರೀಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಷಯ ತಿಳಿದು ರುದ್ರೇಶ್ (35) ಕೂಡ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.








