ಹಾವೇರಿ : ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬೇಲ್ ಸಿಕ್ಕ ಕೂಡಲೇ ಪ್ರಕರಣದ ಆರೋಪಿಗಳಿಂದ ರೋಡ್ ಶೋ ನಡೆಸಲಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ರೋಡ್ ಶೋ ನಡೆದಿದೆ. ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕ್ಕಿ ಆಲೂರು ಪಟ್ಟಣದಲ್ಲಿ ಆರೋಪಿಗಳಿಂದ ಇದೀಗ ರೋಡ್ ಶೋ ನಡೆಸಲಾಗಿದೆ.
ಹಾವೇರಿ ಸಬ್ ಜೈಲಿನಿಂದ ಅಕ್ಕಿ ಆಲೂರಿನವರೆಗೂ ಇದೀಗ ಆರೋಪಿಗಳು ರೋಡ್ ಶೋ ನಡೆಸಿದ್ದಾರೆ. 5 ಕಾರುಗಳಲ್ಲಿ 20 ಕ್ಕೂ ಹೆಚ್ಚು ಹಿಂಬಾಲಕರ ಜೊತೆಗೆ ಮೆರವಣಿಗೆ ನಡೆಸಿದ್ದಾರೆ. ಕಳೆದ 2024 ಜನವರಿ 8ರಂದು ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಇದೀಗ ಈ ಒಂದು ಪ್ರಕರಣದಲ್ಲಿ ಬೇಲ್ ಪಡೆದುಕೊಂಡು ಹೊರಬಂದ ಆರೋಪಿಗಳು ರೋಡ್ ಶೋ ನಡೆಸಿದ್ದಾರೆ. ರೋಡ್ ಶೋ ನಡೆಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೇಲ್ ಷರತ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಇಂದು ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ಪ್ರಮುಖ ಆರೋಪಿಗಳಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನಿಬ್ಬರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಮೆರವಣಿಗೆ ನಡೆಸಿದವರ ಮೇಲೆ ಹೊಸ ಪ್ರಕರಣ ದಾಖಲು ಮಾಡುವ ಸಾಧ್ಯತೆ ಇದೆ.