ಬೆಂಗಳೂರು : HRMS. 2.0 ಯೋಜನೆಯಲ್ಲಿ ನೌಕರರ ಸಂಪೂರ್ಣ ಸೇವಾ ಮಾಹಿತಿಯನ್ನು ಅಳವಡಿಸಿಕೊಳ್ಳುವ ಹಾಗೂ ವೇತನ ಸೆಳೆಯುವ ಕುರಿತು ನೀಡುವ ತರಬೇತಿಗೆ ಹಾಜರಾಗುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ HRMS 1.0 ತಂತ್ರಾಂಶವನ್ನು HRMS. 2.0 ಯೋಜನೆಗೆ ಉನ್ನತೀಕರಿಸಲಾಗುತ್ತಿದ್ದು ಈ ಸಂಬಂಧ ದಿನಾಂಕ: 08-12-2025 ಮತ್ತು 09-12-2025 ಬೆಳಿಗ್ಗೆ 11.30ರಿಂದ 1.30 ಮತ್ತು ಅಪರಾಹ್ನ 2.30ರಿಂದ 5.30ರವರೆಗೆ ತರಬೇತಿಯನ್ನು ಹಮ್ಮಿಕೊಂಡಿದ್ದು ರಾಜ್ಯದ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು, ವಿಷಯ ನಿರ್ವಾಹಕರು ಕಡ್ಡಾಯವಾಗಿ ಭಾಗವಹಿಸುವುದು. ಹೆಚ್.ಆರ್. ಎಂ. ಎಸ್. 1.0ನಲ್ಲಿನ ನೌಕರರ ಸೇವಾ ಮಾಹಿತಿಗಳು ಪಡೆಯುತ್ತಿರುವ ಭತ್ಯೆಗಳು ಕಟಾವಣೆಗಳು ಮುಂಗಡಗಳು ಮತ್ತು KASS /KGID ಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಿಕೊಂಡು ಡಿ.ಡಿ.ಒ ಹಂತದಲ್ಲಿ ನವೀಕರಿಸಿಕೊಳ್ಳುವುದು (Update)
ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) (ಅಭಿವೃದ್ಧಿ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಅಧೀನದಲ್ಲಿರುವ ವೇತನ ಬಟವಾಡೆ ಅಧಿಕಾರಿಗಳು ಹಾಗೂ ವಿಷಯ ನಿರ್ವಾಹಕರುಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗುವಂತೆ ಕ್ರಮವಹಿಸುವುದು. ತರಬೇತಿ ಲಿಂಕ್ ಅನ್ನು ವೈಯುಕ್ತಿಕವಾಗಿ ಲಾಗಿನ್ ಆಗುವುದರಿಂದ ಬೇರೆ ಡಿಡಿಓಗಳಿಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆಯಾ ವಿಭಾಗವಾರು ನಿಗದಿಪಡಿಸಿದ ತರಬೇತಿ ದಿನಾಂಕಗಳಂದು ತಾಲ್ಲೂಕಿನ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಒಂದೇ ಕಡೆ ಕಡ್ಡಾಯವಾಗಿ ಹಾಜರಾಗಿ ತರಬೇತಿ ಪಡೆಯಲು ಕ್ರಮವಹಿಸುವುದು.
ತರಬೇತಿಗೆ ಹಾಜರಾಗಲು ಲಿಂಕ್ ಹಾಗೂ ಜಿಲ್ಲಾವಾರು ನಿಗದಿಪಡಿಸಿದ ದಿನಾಂಕಗಳ ವೇಳಾಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.









