ಬೆಂಗಳೂರು : ಯೋಜನಾ ಪ್ರಾಧಿಕಾರದ ವಿನ್ಯಾಸ ಅನುಮೋದಿತ ಆಸ್ತಿ ವರ್ಗೀಕರಣದಡಿಯಲ್ಲಿ 11ಎ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಇ-ಖಾತಾ ಪಡೆಯಲು ನಾಗರಿಕರು ಮನೆಯಲ್ಲಿ ಕುಳಿತು ಆನ್ ಲೈನ್ ಮುಖಾಂತರ ಇ-ಸ್ವತ್ತು 2.0 ತಂತ್ರಾಂಶದ https://eswathu.karnataka.gov.in/ ಮೂಲಕ ಅರ್ಜಿ ಸಲ್ಲಿಸಿ.
ಸ್ಥಳೀಯ ಯೋಜನಾ ಪ್ರದೇಶಗಳಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಥಳೀಯ ಯೋಜನಾ ಪ್ರದೇಶದ ಹೊರ ಭಾಗದಲ್ಲಿ ಸ್ಥಳೀಯ ಯೋಜನಾ ಪ್ರಾಧಿಕಾರದ ವಿನ್ಯಾಸ ಅನುಮೋದಿತ ಆಸ್ತಿಯಾಗಿದೆ.
ಈ ವರ್ಗೀಕರಣದಡಿ ಸಲ್ಲಿಸಬೇಕಾದ ದಾಖಲೆಗಳು
ಭೂ ಪರಿವರ್ತನೆ ಆದೇಶ ಪತ್ರ-ಕಡ್ಡಾಯ
ಪ್ರಾಥಮಿಕ ವಿನ್ಯಾಸ ಅನುಮೋದನೆ ಮತ್ತು ನಿವೇಶನ ಬಿಡುಗಡೆ ಆದೇಶ, ಅಂತಿಮ ವಿನ್ಯಾಸ ಅನುಮೋದನೆ ಮತ್ತು ನಿವೇಶನ ಬಿಡುಗಡೆ ಆದೇಶ-ಕಡ್ಡಾಯ
ಅನುಮೋದಿತ ವಿನ್ಯಾಸ ನಕ್ಷೆ-ಕಡ್ಡಾಯ
ನಿವೇಶನ ಹಂಚಿಕೆ ಪತ್ರ\ಸ್ವಾಧೀನ ಪತ್ರ-ೈಚ್ಛಿಕ
ಋಣಭಾರ ಪ್ರಮಾಣಪತ್ರ (ನಮೂನೆ-15)-ಐಚ್ಛಿಕ
ಇ-ಸ್ವತ್ತು ಪಡೆಯಲು ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳಿಗೆ ಸಹಾಯವಾಣಿ ಸಂಖ್ಯೆ 9483476000 ಗೆ ಕರೆ ಮಾಡಿ.








