ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ವಿಷಪೂರಿತ ನೀರು ಕುಡಿದು 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.
ರಾಜು ಹಾಗೂ ಸುನಿಲ್ ಎಂಬುವರಿಗೆ ಸೇರಿದ 30ಕ್ಕೂ ಹೆಚ್ಚು ಕುರಿಗಳು ಇದೀಗ ಸಾವನ್ನಪ್ಪಿವೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚನ್ನಾಪುರದ ನಿವಾಸಿಗಳಾದ ಇವರು, 500ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಲು ಬಂದಿದ್ದರು. ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಕುರಿಗಳು ಚರಂಡಿ ನೀರು ಕುಡಿದಿವೆ.
ನೀರು ಕುಡಿದ ಕೆಲವೇ ಹೊತ್ತಿನಲ್ಲಿ 15 ಕುರಿಗಳು ಸಾವನ್ನಪ್ಪಿವೆ. ಇಂದು ಮತ್ತೆ 20 ಗುರಿಗಳು ಸಾವನಪ್ಪಿದ್ದು ಇನ್ನೂ 20ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಕಾರ್ಖಾನೆಗಳಿಂದ ವಿಷಪೂರಿತ ನೀರು ಚರಂಡಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಕುರಿತಂತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.