ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ತಲಘಟ್ಟಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ತುಮಕೂರು ಜಿಲ್ಲೆ ಮಧುಗಿರಿ ಮೂಲದ ಕ್ಯಾಬ್ ಚಾಲಕ ದೇವರಾಜ್ (32) ಹಾಗೂ ಅಶೋಕ (35) ಮೃತರು. ಶ್ರೀನಿವಾಸ್, ಮದನ್, ಮಹಂತೇಶ್ ಎಂಬುವರು ಗಾಯ ಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರಾಜ್ ಕ್ಯಾಬ್ ಚಾಲಕನಾಗಿ ಹಾಗೂ ಅಶೋಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಗಾಯಾಳುಗಳು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿ ದ್ದರು. ಎಲ್ಲರೂ ಲಗ್ಗೆರೆ, ನೆಲಮಂಗಲ ಸಮೀಪದಲ್ಲಿ ವಾಸವಾಗಿದ್ದು ಸ್ನೇಹಿತರಾಗಿದ್ದಾರೆ.
ತಡರಾತ್ರಿ ಐವರು ಕ್ಯಾಬ್‌ನಲ್ಲಿ ಹೊಸಕೆ ರೆಹಳ್ಳಿಯಿಂದ ತುಮಕೂರು ರಸ್ತೆ ಕಡೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಸೋಂಪುರ ಸಮೀಪ ರಸ್ತೆಯ ಉಬ್ಬು ಗಳನ್ನು ಎಗರಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕ್ಯಾಬ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಮಣ್ಣಿನ ಗುಡ್ಡೆಯ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ದೇವರಾಜ್ ಮತ್ತು ಅಶೋಕ್ ಸ್ಥಳದಲ್ಲೇ ಮೃತಪಟ್ಟರೆ. 3 ಗಾಯಗೊಂಡಿದ್ದಾರೆ. ಅತಿವೇಗ ಹಾಗೂ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.








