ಬೆಳಗಾವಿ : ಸದ್ಯ ರಾಜ್ಯದಲ್ಲಿ ಹನಿ ಟ್ರ್ಯಾಪ್ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಮೇಲೆ ಹನಿ ಟ್ರ್ಯಾಪ್ ಗೆ ಯತ್ನ ನಡೆದಿತ್ತು ಎನ್ನಲಾಗಿದೆ. ಇನ್ನು ಇದೇ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಇದೇನು ಹೊಸ ವಿಷಯವೇನಲ್ಲ ಹಿಂದೆಯೂ ಹಲವು ಬಾರಿ ಹನಿ ಟ್ರ್ಯಾಪ್ ನಡೆದಿದ್ದವು.ಸಮ್ಮಿಶ್ರ ಸರ್ಕಾರ ಪತನವಾಗಲು ಕೂಡ ಹನಿ ಟ್ರ್ಯಾಕ್ ವಿಷಯ ಕೇಳಿಬಂದಿತ್ತು ಎಂದು ತಿಳಿಸಿದರು.
ಇದೊಂದು ಗಂಭೀರ ವಿಷಯ ಈ ಹಿಂದೆಯೂ ಇಂತಹ ಘಟನೆ ನಡೆದಿವೆ. ಸಾರ್ವಜನಿಕ ಜೀವನದಲ್ಲಿರುವವರಿಗೆ ಉದ್ದೇಶಪೂರ್ವಕವಾಗಿ ಸಿಲುಕಿಸುವ ಯತ್ನ ಆಗಿದೆ. ಹನಿ ಟ್ರ್ಯಾಪ್ ಅನ್ನೋದು ಹೊಸ ವಿಷಯವೇನೆಲ್ಲ. ಬೆಳಗಾವಿ ಜಿಲ್ಲೆ ಸೇರಿ ಬೇರೆ ಕಡೆಗಳಲ್ಲೂ ಇಂತಹ ಪ್ರಕರಣಗಳು ನಡೆದಿದೆ.ಸಮ್ಮಿಶ್ರ ಸರ್ಕಾರ ಪತ್ರವಾದಾಗಲು ಹನಿ ಟ್ರ್ಯಪ್ ವಿಷಯ ಕೇಳಿ ಬಂದಿತ್ತು ಎಂದು ದಿನೇಶ ಗುಂಡೂರಾವ್ ತಿಳಿಸಿದರು.
ಬೇರೆ ಉದ್ಯಮದಲ್ಲಿ ಇರುವವರಿಗೆ ಟ್ರ್ಯಪ್ ಮಾಡುವಂಥದ್ದು ನೋಡಿದ್ದೇವೆ. ಹಾಗಾಗಿ ಇದು ಗಂಭೀರ ಪ್ರಕರಣವಾಗಿದೆ. ಸಚಿವ ರಾಜಣ್ಣ ಅವರು ಏನು ದೂರು ನೀಡುತ್ತಾರೋ ಅದರ ಮೇಲೆ ಸರ್ಕಾರದಿಂದ ತನಿಖೆ ನಡೆಯುತ್ತದೆ. ಬಿಜೆಪಿಯವರು ಈ ಬಗ್ಗೆ ಸುಖ-ಸುಮನೆ ಆರೋಪ ಮಾಡುತ್ತಿದ್ದಾರೆ. ಹನಿ ಡ್ರಾಪ್ ಅನ್ನೋದು ಕೇವಲ ಒಂದು ಪಕ್ಷಕ್ಕೆ ಸೀಮಿತ ಆಗಬಾರದು. ಇದಕ್ಕೆ ಹಲವರು ಸಿಲುಕಿ ಸಂಕಷ್ಟಕ್ಕೆ ಒಳಗಾದವರು ಇದ್ದಾರೆ. ಇದನ್ನ ಯಾರು ಮಾಡಿಸಿದ್ದಾರೆ ಎಂದು ಪತ್ತೆ ಹಚ್ಚಬೇಕಿದೆ.
ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ವಿಚಾರವಾಗಿ, ಸದನದಲ್ಲಿ ಬಿಜೆಪಿಯವರು ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತನೆ ತೋರಿದ್ದಾರೆ. ಈ ಹಿಂದೆ ಹಲವು ಘಟನೆಗಳು ಆಗಿವೆ ಅಂದೆ ಸ್ಪೀಕರ್ ಕ್ರಮ ಕೈಗೊಳ್ಳಬೇಕಿತ್ತು. ಸ್ಪೀಕರ್ ಬಳಿ ಹೋಗಿ ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಉದ್ದೇಶಪೂರ್ವಕವಾಗಿ ಬಿಜೆಪಿಯವರು ಸದನದಲ್ಲಿ ಈ ರೀತಿ ವರ್ತಿಸಿದ್ದಾರೆ. ಇಂತಹ ದುರ್ವರ್ತನೆ ಖಂಡಿತಾ ಸಹಿಸುವುದಕ್ಕೆ ಆಗಲ್ಲ. ಸಿದ್ದರಾಮಯ್ಯ ಸದನದ ಬಾಗಿಲು ಒದ್ದಿದ್ದರು ಎಂಬ ಬಿಜೆಪಿ ಹೇಳಿಕೆ ವಿಚಾರವಾಗಿ ಸದನದ ಬಾಗಿಲಿಗೆ ಕಮಿಷನರನ್ನು ನಿಲ್ಲಿಸಿ ಒಳಗೆ ಬಾರದಂತೆ ತಡೆದಿದ್ದರು ಆ ಸಂದರ್ಭ ಭಾವನಾತ್ಮಕವಾಗಿತ್ತು. ಆದರೆ ಇದೇ ಬೇರೆ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡಬಾರದೆಂದು ಹೀಗೆ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.