ಬೆಂಗಳೂರು : ರಾಜ್ಯದ ಸಹಕಾರ ಸಚಿವ ಏನ್ ರಾಜಣ್ಣ ಅವರ ಮೇಲೆ ಹನಿ ಟ್ರ್ಯಾಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಸಹಕಾರ ಸಚಿವ ರಾಜಣ್ಣ ಅವರು ಭೇಟಿಯಾಗಿ ಕೆಲಕಾಲ ಈ ಕುರಿತು ಚರ್ಚಿಸಿದರು.
ಟಿ ಬೇಗೂರಿನಲ್ಲಿ ಜಿ ಪರಮೇಶ್ವರ್ ಅವರನ್ನು ಸಚಿವ ಕೆ ಎನ್ ರಾಜಣ್ಣ ಭೇಟಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ.ಬೆಗೂರು ಗ್ರಾಮದಲ್ಲಿ ಜಿ ಪರಮೇಶ್ವರ್ ಅವರನ್ನು ರಾಜಣ್ಣ ಭೇಟಿಯಾದರು ಬಳಿಕ ಪರಮೇಶ್ವರ್ ಜೊತೆಗೆ ಸಚಿವ ರಾಜಣ್ಣ ಕೆಲಕಾಲ ಚರ್ಚೆ ಮಾಡಿದರು.
ಇನ್ನು ಇದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಿಗ್ಗೆ ಗೃಹ ಸಚಿವರನ್ನು ಹುಡುಕಿಕೊಂಡು ಹೋಗಿ ದೂರು ನೀಡುತ್ತೇನೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಗೃಹ ಸಚಿವ ಪರಮೇಶ್ವರ ಅವರನ್ನು ಭೇಟಿಯಾದ ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಕುರಿತಂತೆ ಪತ್ರದ ಮುಖಾಂತರ ಲಿಖಿತ ರೂಪದಲ್ಲಿ ಹುಡುಕಿಕೊಂಡು ಹೋಗಿ ದೂರು ನೀಡುತ್ತೇನೆ ಎಂದಿದ್ದರು. ಹಾಗಾಗಿ ಇದೀಗ ದೂರು ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇನ್ನು ಹನಿಟ್ರ್ಯಾಪ್ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ವಿಚಾರಗಳನ್ನು ಸಚಿವ ಕೆಎನ್ ರಾಜಣ್ಣ ಬಹಿರಂಗಪಡಿಸಿದ್ದಾರೆ. ಎರಡು ಬಾರಿ ಒಬ್ಬ ಹುಡುಗ ಬಂದಿದ್ದ. ಬ್ಲೂ ಜೀನ್ಸ್ ಹಾಕಿಕೊಂಡಿದ್ದ ಒಬ್ಬಳು ಹುಡುಗಿ 2 ಸಲ ಬಂದಿದ್ದಳು. ಮೊದಲ ಬಾರಿ ಬಂದಾಗ ಯಾರು ಎಂದು ಹೇಳಿರಲಿಲ್ಲ. ಸರ್, ನಿಮ್ಮತ್ರ ಬಹಳ ಪರ್ಸನಲ್ಲಾಗಿ ಗುಟ್ಟಾಗಿ ಮಾತನಾಡಬೇಕು ಎಂದಿದ್ದಳು. ಎರಡನೇ ಸಲ ಬಂದಾಗ, ಹೈಕೋರ್ಟ್ ವಕೀಲೆ ಎಂದು ಹೇಳಿಕೊಂಡಿದ್ದಳು ಎಂದು ತಿಳಿಸಿದರು.