ಬೆಂಗಳೂರು : ಕೇಂದ್ರದ ಹುದ್ದೆಗೆ ಪ್ರಣವ್ ಮೋಹಂತಿ ನೇಮಕ ಆಗಿದ್ದಾರೆ ನಿಜಕ್ಕೂ ನಮ್ಮ ಕರ್ನಾಟಕಕ್ಕೆ ದೊಡ್ಡ ಕ್ರೆಡಿಟ್ ತಕ್ಷಣವೇ ಯಾವುದೇ ಹುದ್ದೆ ಕೊಡುತ್ತಾರೆ ಎಂಬುದು ಇಲ್ಲ ಕೇಂದ್ರಕ್ಕೆ ನೇಮಕವಾಗಿರುವ ಬಗ್ಗೆ ನನಗೆ ತಿಳಿಸಲು ಪ್ರಣವ್ ಮೋಹಂತಿ ನನ್ನನ್ನು ಭೇಟಿಯಾಗಲು ಬಂದಿದ್ದರು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಇಂದು ಎಸ್ಐಟಿ ಮುಖ್ಯಸ್ಥರು ಬೆಂಗಳೂರಿನ ಸದಾಶಿವನ ನಗರದಲ್ಲಿರುವ ಗ್ರೂಜ ಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿ ಆದರೂ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಬಿಟ್ಟು ಬೇರೆ ಯಾವುದೇ ಚರ್ಚೆ ನಡೆದಿಲ್ಲ ಎಸ್ ಐ ಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ವರದಿ ಕೊಡುವವರೆಗೂ ಆ ಬಗ್ಗೆ ಮಾತನಾಡಲು ಹೋಗಲ್ಲ ತನಿಖೆಯ ವೇಳೆ ನಾವ್ಯಾರು ಪ್ರಕರಣದ ಕುರಿತು ಮಾತನಾಡಲ್ಲ.
ಪ್ರಣವ್ ಮೋಹಂತಿ ಹೊರಗಡೆ ಹೋಗುವ ಪ್ರಶ್ನೆ ಎಲ್ಲಿ ಬಂದಿದೆ? ಅವರು ಕರೆದಾಗ ನಾವು ಕಳುಹಿಸುತ್ತೇವೆ ಎಂಬುದೇನು ಇಲ್ಲ ಇಂತಹ ಜಾಗಕ್ಕೆ ನೇಮಕ ಮಾಡುತ್ತಿದ್ದೇವೆ ಎಂದು ಕೇಂದ್ರ ಹೇಳಬೇಕು ಮೋಹಂತಿ ಸೆಲೆಕ್ಟ್ ಆಗಿದ್ದಾರೆ ಅಷ್ಟೇ ನಾವು ಅವರನ್ನು ಕಳುಹಿಸುತ್ತೀವೋ ಬಿಡುತ್ತೇವೆ ಅದು ನಮಗೆ ಬಿಟ್ಟ ವಿಚಾರ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದರು.