ಬೆಂಗಳೂರು : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕುಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು ಮಾನವೀಯ ಇರುವವರು ಯಾರು ಕೂಡ ಇಂತಹ ನೀತಿ ಕೃತ್ಯ ಮಾಡಲ್ಲ. ಆತ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದೆ. ಪ್ರಕರಣದ ಹಿಂದೆ ಮತ್ತೆ ಯಾರೋ ಇದ್ದರೆ ಆತ ಬಾಯಿ ಬಿಡುತ್ತಾನೆ. ಆಮೇಲೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನಿಗೆ ವಿರುದ್ಧವಾಗಿ ನಡೆಯುವವರಿಗೆ ಕ್ಷಮೆ ಇಲ್ಲ. ಯಾರನ್ನೋ ಕರೆತಂದು ಅರೆಸ್ಟ್ ಮಾಡುವುದಕ್ಕೆ ಆಗಲ್ಲ ಎಂದು ಬಿಜೆಪಿ ಆರೋಪಕ್ಕೆ ಜಿ. ಪರಮೇಶ್ವರ ಹೇಳಿಕೆ ನೀಡಿದರು. ಸದ್ಯ ಪ್ರಕರಣದ ಆರೋಪಿಯ ಬಗ್ಗೆ ಸಾಕ್ಷಿ ಸಿಕ್ಕಿದ್ದಕ್ಕೆ ಅರೆಸ್ಟ್ ಮಾಡಿದ್ದಾರೆ. ಅವನ ಜೊತೆ ಬೇರೆ ಯಾರಾದರೂ ಇದ್ದಿದ್ದರೆ ಆತ ಬಾಯಿಬಿಡುತ್ತಾನೆ.
ಪ್ರಕರಣದಲ್ಲಿ ಎಷ್ಟೇ ದೊಡ್ಡವರಿರ ಲ್ಲಿ ಚಿಕ್ಕವರಿರಲಿ ಕಾನೂನು ವಿರುದ್ಧವಾಗಿ ನಡೆದುಕೊಳ್ಳುವವರಿಗೆ ಕ್ಷಮೆ ಇರಲ್ಲ. ಘಟನೆಯಲ್ಲಿ ಇನ್ಯಾರೋರು ಇದ್ದರೂ ಕೂಡ ಆರೋಪಿ ಬಾಯಿ ಬಿಡುತ್ತಾನೆ. ಅವರ ವಿರುದ್ಧವು ಕೇಸ್ ಹಾಕುತ್ತಾರೆ. ಅವನು ಬಿಹಾರ್ದಿಂದ ಬಂದಿದ್ದಾನೆ. ಕುಡಿದ ಮತ್ತಿನಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದಾನೆ. ಮಾನವೀಯತೆ ಇರುವವರು ಯಾರು ಆ ರೀತಿ ಕೆಲಸ ಮಾಡಲ್ಲ. ಸದ್ಯಕ್ಕೆ ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ. ಅವನ ಹಿಂದೆ ಯಾರೆ ಇದ್ದರು ಆತ ಬಾಯಿಬಿಡುತ್ತಾನೆ.ಅವರ ಎಲ್ಲರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದರು.