ಬೆಂಗಳೂರು : ಮಹೇಶ್ ಶೆಟ್ಟಿ ತಿಮರೋಡಿಗೆ ಇಂದು 3ನೇ ಬಾರಿ ಗಡಿಪಾರು ಆದೇಶ ನೀಡಲಾಗಿತ್ತು. ಈ ವಿಚಾರವಾಗಿ ಅವರು ಹೈಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಮೇಲ್ಮನವಿಯನ್ನು ಇದೀಗ ಹೈಕೋರ್ಟ್ ವಿಭಾಗಿಯ ಪೀಠ ವಜಾಗೊಳಿಸಿದೆ.
ಗಡಿಪಾರು ಸಂಬಂಧ ಅಕ್ಷೇಪಣೆ ಪರಿಗಣನೆಗೆ ಏಕ ಸದಸ್ಯ ಪೀಠ ಸೂಚಿಸಿತ್ತು. 3 ವಾರಗಳಲ್ಲಿ ಆಕ್ಷೇಪಣೆ ಪರಿಗಣಿಸಿ ಆದೇಶ ನೀಡಲು ಸೂಚಿಸಿತ್ತು. ಉಪ ವಿಭಾಗಾಧಿಕಾರಿಗೆ ಹೈಕೋರ್ಟ್ ಏಕ ಸದಸ್ಯ ಪೀಠ ಸೂಚನೆ ನೀಡಿತ್ತು. ಈ ಆದೇಶ ಪ್ರಶ್ನಿಸಿ ಮಹೇಶ ಶೆಟ್ಟಿ ಮರೋಡಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠದ ಆದೇಶ ಎತ್ತಿ ಹಿಡಿದು ಇದೀಗ ಮಹೇಶ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಭಾಗಿಯ ಪೀಠ ವಜಗೊಳಿಸಿದೆ.








