ಚಾಮರಾಜನಗರ : ಯಾವುದೇ ಸರ್ಕಾರ ಬರಲಿ ಹೋಗಲಿ ಆದರೆ ವ್ಯವಸ್ಥೆ ಮಾತ್ರ ಬದಲಾಗಲ್ಲ ಎನ್ನುವುದಕ್ಕೆ ಈ ಒಂದು ಘಟನೆಯೆ ಸಾಕ್ಷಿ. ಹೌದು ಅನಾರೋಗ್ಯ ಪೀಡಿತನನ್ನು ಡೋಲಿಯ ಮೂಲಕ ಆಸ್ಪತ್ರೆಗೆ ಸಾಗಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತುಳಸಿಕೆರೆ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ರಸ್ತೆ ಇಲ್ಲದೆ ಅಂಬುಲೆನ್ಸ್ ಬಾರದ ಕಾರಣ ರೋಗಿ ಮತ್ತು ಸ್ಥಳೀಯರು ಪರದಾಟ ನಡೆಸಿದ್ದಾರೆ. ಹನೂರು ತಾಲೂಕಿನ ತುಳಸಿಕೆರೆ ಗ್ರಾಮದಲ್ಲಿ ಈ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಬಳಲಿ ನಿತ್ರಾಣರಾಗಿದ್ದ ಪುಟ್ಟ ಎಂಬ ವ್ಯಕ್ತಿಯನ್ನು 8 ಕಿಲೋಮೀಟರ್ ವರೆಗೂ ಹೊತ್ತುಕೊಂಡು ಜನರು ತಮಿಳುನಾಡಿನ ಗೋಳಮತ್ತುರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗ್ರಾಮಕ್ಕೆ ಸೌಕರ್ಯ ಕಲ್ಪಿಸುವಂತೆ ಇದೀಗ ಜನರು ಒತ್ತಾಯಿಸುತ್ತಿದ್ದಾರೆ.