ಬೆಂಗಳೂರು : ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಗ್ಯ ಇಲಾಖೆಯು ಕಾನೂನು ಹೋರಾಟಕ್ಕೆ ಮುಂದಾಗಿದೆ. ಹೈ ಕೋರ್ಟ್ ನಲ್ಲಿ ಆರೋಗ್ಯ ಇಲಾಖೆ ಕೇಸ್ ದಾಖಲಿಸಿದ್ದು, ಪಶ್ಚಿಮ ಬಂಗಾಳದ ಫಾರ್ಮ ಕಂಪನಿಯ ಮೇಲೆ ಇದೀಗ ಕೇಸ್ ದಾಖಲಿಸಿದೆ.
ಹೌದು ಕಂಪನಿಯ ಮೇಲೆ ಆರೋಗ್ಯ ಇಲಾಖೆಯು ಪ್ರಕರಣ ದಾಖಲಿಸಿದೆ. ಬಾಣಂತಿಯರ ಸಾವು ಪ್ರಕರಣದ ತನಿಖೆಯ ವೇಳೆ ಐ ವಿ ಫ್ಲೋಯೆಡ್ ನಲ್ಲಿ ಆಘಾತಕಾರಿ ಅಂಶ ಬಯಲಾಗಿತ್ತು. 9 ಬ್ಯಾಚ್ ಔಷಧಿ ಹಾಗಾಗಿ ಕ್ವಾಲಿಟಿ ಇಲ್ಲ ಎಂದು ವರದಿ ಬಯಲಾಗಿದೆ. ವರದಿಯನ್ನು ಆಧರಿಸಿ ಇದೀಗ ಆರೋಗ್ಯ ಇಲಾಖೆ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.
ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿದ್ದ ಪಶ್ಚಿಮ ಬಂಗಾಳದ ಫಾರ್ಮಾಸ್ಯುಟಿಕಲ್ಸ್ ಔಷಧ ಕಂಪನಿ ವಿರುದ್ಧ ಆರೋಗ್ಯ ಇಲಾಖೆ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದೆ. ಫಾರ್ಮಾಸ್ಯುಟಿಕಲ್ಸ್ ಔಷಧ ಕಂಪನಿ ಒಟ್ಟು 192 ಬ್ಯಾಚ್ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿತ್ತು. ಇದರಲ್ಲಿ 22 ಬ್ಯಾಚ್ಗಳು ಉಪಯೋಗಕ್ಕೆ ಯೋಗ್ಯವಲ್ಲ ಎಂದು ಕರ್ನಾಟಕ ಔಷಧ ನಿಯಂತ್ರಣ ಇಲಾಖೆ ವರದಿ ನೀಡಿದೆ.
ಕೇಂದ್ರ ಔಷಧ ನಿಯಂತ್ರಣ ಇಲಾಖೆ ವರದಿ 13 ಬ್ಯಾಚ್ಗಳು ಮಾತ್ರ ಬಳಸಲು ಯೋಗ್ಯ ಎಂದು ವರದಿ ನೀಡಿತ್ತು. ಇನ್ನುಳಿದ 9 ಬ್ಯಾಚ್ ಔಷಧಿಗಳು ಯೋಗ್ಯವಲ್ಲ ಎಂದು ಕೇಂದ್ರ ಔಷಧ ನಿಯಂತ್ರಣ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ.ಕೇಂದ್ರ ಔಷಧ ನಿಯಂತ್ರಣ ಇಲಾಖೆ ವರದಿ ಆಧರಿಸಿ ಕರ್ನಾಟಕ ಔಷಧ ನಿಯಂತ್ರಣ ಇಲಾಖೆ 9 ಬ್ಯಾಚ್ಗಳ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿದೆ.