ಬೆಂಗಳೂರು : ಆರೋಗ್ಯ ಇಲಾಖೆಯ ಬೆಂಗಳೂರಿನ ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಉತ್ತರ ಬೆಂಗಳೂರಿನಲ್ಲಿ ಎರಡನೇ ಹೈಟೆಕ್ ನಿಮ್ಹಾನ್ಸ್ ಆಸ್ಪತ್ರೆ ತಲೆ ಎತ್ತುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಮೈಸೂರಿನ ಮಹಾರಾಣಿ ಕಾಲೇಜಿನ ‘ಪ್ರಾಂಶುಪಾಲ’ ಹುದ್ದೆಯಿಂದ ವಸಂತ ಕುಮಾರ್ ಬಿಡುಗಡೆ ಆದೇಶಕ್ಕೆ ನ್ಯಾಯಮಂಡಳಿ ತಡೆ
40 ಎಕರೆ ಜಾಗದಲ್ಲಿ ಮಲ್ಟಿ ಸೂಪರ್ ಸ್ಪೆಷಾಲಿಟಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ನಗರದಲ್ಲಿ ರಸ್ತೆ ಅಪಘಾತದಿಂದ ನರ ಹಾಗೂ ಬ್ರೈನ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದುವೇ ಸಾವಿರಾರು ಜನರು ಸಾವಿಗೆ ಕಾಣವಾಗುತ್ತಿದೆ ಎಂದು ತಿಳಿಸಿದರು.
BREAKING : ಡಿ ಬಾಸ್ ಗೆ ಮತ್ತೊಂದು ಸಂಕಷ್ಟ : ‘ಶ್ರೀ ಶಕ್ತಿ ಸಂಘದಿಂದ’ ನಟ ದರ್ಶನ್ ವಿರುದ್ಧ ದೂರು ದಾಖಲು
ನಿಮ್ಹಾನ್ಸ್ ಎರಡನೇ ಘಟಕಕ್ಕೆ ರಾಜ್ಯ ಸರ್ಕಾರ ಈಗಾಗಲೇ ಭೂಮಿ ನೀಡಿದೆ. ಬೆಂಗಳೂರಿನ ಕ್ಯಾನ್ಸನಹಳ್ಳಿಯಲ್ಲಿ ಸರ್ಕಾರ ಒದಗಿಸಿರುವ ಸುಮಾರು 40 ಎಕರೆ ಪ್ರದೇಶದಲ್ಲಿ ನಿಮ್ಹಾನ್ಸ್ ಆಸ್ಪತ್ರೆ ತಲೆ ಎತ್ತುತ್ತಿದೆ ಎಂದು ಅವರು ತಿಳಿಸಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆ ದೇಶದಲ್ಲಿಯೇ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ವಿಶೇಷ ಆಸ್ಪತ್ರೆಯಾಗಿದೆ. ನರ ವಿಭಾಗ, ಮೆದುಳಿನ ಶಸ್ತ್ರಚಿಕಿತ್ಸೆಗೆ ದೇಶದಲ್ಲೇ ಪ್ರಸಿದ್ಧವಾಗಿದೆ.
ಬೆಂಗಳೂರಿನ ಮನೆಯಲ್ಲಿ ವೃದ್ಧ ದಂಪತಿ ಶವವಾಗಿ ಪತ್ತೆ: ‘ಆತ್ಮಹತ್ಯೆ’ ಶಂಕೆ