ಬೆಂಗಳೂರು : ಉದ್ಯಮಿಯೊಬ್ಬರಿಗೆ ಹಲ್ಲೆ ಮಾಡಿ, ಗನ್ ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಮಾಜಿ ರೌಡಿಶೀಟರ್ ಸೇರಿ ಇಬ್ಬರನ್ನು ಸದಾಶಿವನಗರ ಠಾಣೆ ಪೊಲೀಸರು ಬ್ರೆಸ್ಟ್ ಮಾಡಿದ್ದರು. ಆದರೆ ಇದೀಗ ಹೈಕೋರ್ಟ್ ಫೈಟರ್ ರವಿಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಹೌದು ಉದ್ಯಮಿ ಒಬ್ಬರಿಗೆ ಫೈಟರ್ ಅಭಿ ಗನ್ ತೋರಿಸಿ ಬೆದರಿಕೆ ಹಾಕಿದ್ದ. ಈ ವಿಚಾರವಾಗಿ ಉದ್ಯಮಿ ಸೋಮಶೇಖರ್ ಎನ್ನುವವರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು.ಈ ಒಂದು ಊರಿನ ಅನ್ವಯ ಫೈಟರ್ ರವಿ ಹಾಗೂ ಆತನ ಗನ್ ಮ್ಯಾನ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ಪೊಲೀಸರು ನಾಲ್ಕು ದಿನ ತೆಗೆದುಕೊಂಡಿದ್ದು ಇಂದು ಫೈಟರ್ ರವಿ ಪೊಲೀಸ್ ಕಸ್ಟಡಿ ಅಂತ್ಯವಾಗಿದೆ. ಹಾಗಾಗಿ ಹೈಕೋರ್ಟ್ ಕೂಡ ಫೈಟರ್ ಅವರಿಗೆ ಶರತ್ತು ಬದ್ಧ ಜಾಮೀನು ನೀಡಿದೆ.
ಘಟನೆ ಹಿನ್ನೆಲೆ?
ದೂರುದಾರ ಉದ್ಯಮಿ ಸೋಮಶೇಖರ್ ಅವರು ಪರಿಚಿತ ಶ್ರೀಕಾಂತ್ ಎಂಬುವವರಿಗೆ ೭೫ ಲಕ್ಷ ರೂ. ಸಾಲ ನೀಡಿದ್ದರು. ಈ ಸಾಲ ವಾಪಾಸ್ ನೀಡುವಂತೆ ಸೋಮಶೇಖರ್ ಆಗಾಗ ಶ್ರೀಕಾಂತ್‌ಗೆ ಕೇಳುತ್ತಿದ್ದರು. ಈ ವಿಚಾರವನ್ನು ಶ್ರೀಕಾಂತ್, ಫೈಟರ್ ರವಿಗೆ ತಿಳಿಸಿದ್ದರು. ಹೀಗಾಗಿ ಗುರುವಾರ ಸಂಜೆ ಸೋಮಶೇಖರ್ ಅವರನ್ನು ಸದಾಶಿವನಗರದ ಕಚೇರಿಗೆ ಕರೆಸಿಕೊಂಡಿದ್ದ ಫೈಟರ್ ರವಿ, ಶ್ರೀಕಾಂತ್‌ಗೆ ನೀಡಿರುವ ಸಾಲವನ್ನು ವಾಪಾಸ್ ಕೇಳದಂತೆ ಧಮಕಿ ಹಾಕಿದ್ದಾರೆ.
ಮಾತಿಗೆ ಮಾತು ಬೆಳೆದು ಫೈಟರ್ ರವಿ, ಉದ್ಯಮಿ ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದ ಬಳಿಕ ತನ್ನ ಗನ್‌ಮ್ಯಾನ್ ಬಳಿಯಿದ್ದ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಸೋಮಶೇಖರ್ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು ಇದೀಗ ಹೈಕೋರ್ಟ್ ಫೈಟರ್ ರವಿಗೆ ಷರತ್ತು ಬದ್ಧ ಜಾಮೀನು ನೀಡಿದೆ.