ಬೆಂಗಳೂರು : ಮೈಸೂರಿನ ಕೆಆರ್ ನಗರದ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪ್ರಕರಣದ ಆರೋಪಿ ಆಗಿರುವ ಭವಾನಿ ರೇವಣ್ಣ ಅವರಿಗೆ ಇದೀಗ ಹೈಕೋರ್ಟ್ ಷರತ್ತು ಸಡಿಲಿಸಿದೆ. ಹಾಸನ ಮತ್ತು ಮೈಸೂರಿಗೆ ತೆರಳಲು ಹೈಕೋರ್ಟ್ ಇದೀಗ ಭವಾನಿ ರೇವಣ್ಣ ಅವರಿಗೆ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಹೌದು ಮೈಸೂರು ಜಿಲ್ಲೆಯ ಕೆ ಆರ್ ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನ ಮತ್ತು ಮೈಸೂರಿಗೆ ತೆರಳಲು ಭವಾನಿ ರೇವಣ್ಣಗೆ ಇದೀಗ ಹೈಕೋರ್ಟ್ ಅನುಮತಿ ನೀಡಿದೆ. ಷರತ್ತು ಬುದ್ಧ ಅನುಮತಿ ನೀಡಿ ಹೈಕೋರ್ಟ್ ಏಕ ಸದಸ್ಯಪೀಠ ಆದೇಶಿಸಿದೆ. ನಿರೀಕ್ಷಣಾ ಜಾಮೀನು ವೇಳೆ ಹೈಕೋರ್ಟ್ ಷರತ್ತು ವಿಧಿಸಿತ್ತು. ಇದೀಗ ಶರತ್ತು ಸಡಲಿಸಿದೆ. ಅಲ್ಲದೇ ಸಂತ್ರಸ್ತ ಮತ್ತು ಸಾಕ್ಷಿಗಳ ಮನೆಯ 500 ಮೀಟರ್ ಸುತ್ತಳತೆ ಪ್ರವೇಶಿಸುವಂತಿಲ್ಲ ಎಂದು ಭವಾನಿ ರೇವಣ್ಣಗೆ ಹೈಕೋರ್ಟ್ ಇದೆ ವೇಳೆ ಹೊಸ ಷರತ್ತನ್ನು ವಿಧಿಸಿದೆ.