ಹಾಸನ : ಹಾಸನದಲ್ಲಿ ಸೈಟ್ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ಯಶ್ ತಾಯಿ ಅವರಿಗೆ ಕಾನೂನು ಹೋರಾಟದಲ್ಲಿ ಮುನ್ನಡೆ ಸಿಕ್ಕಿದೆ. ಪ್ರತಿವಾದಿ ಪರ ಬಂದಿದ್ದ ಆದೇಶಕ್ಕೆ ಕೋರ್ಟ್ ಇದೀಗ ತಡೆ ನೀಡಿದೆ ಹಾಸನದ ನಾಲ್ಕನೇ ಜೆ ಎಂ ಎಫ್ ಸಿ ಕೋರ್ಟ್ ಈ ಆದೇಶ ಹೊರಡಿಸಿದೆ.
ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ಹಾಕಿದ್ದ ಈ ಒಂದು ಕೆ ಎಸ್ ನಲ್ಲಿ ಸೈಟ್ ಮಾಲೀಕರು ಎಂದು ಹೇಳುತ್ತಿರುವ ಲಕ್ಷ್ಮಮ್ಮ ಕಕ್ಷಿದಾರರಾಗಿ ಪರಿಗಣಿಸದೆ ಆದೇಶ ಎಂದು ಪುಷ್ಪ ಅವರು ಅರ್ಜಿ ಸಲ್ಲಿಸಿದರು. ಆದೇಶವನ್ನು 90 ದಿನದ ಒಳಗೆ ಮೇಲ್ಮನವಿ ಹಾಕದ ಬಗ್ಗೆ ಅರ್ಜಿ ಸಲ್ಲಿಸಿದ್ದು ವಿಳಂಬ ಅರ್ಜಿ ಮಾನ್ಯ ಮಾಡಿ ಕಕ್ಷಿದಾರರಿಗೆ ಹಾಜರಾಗಲು ಅವಕಾಶ ನೀಡಿತು.
ಫೆಬ್ರವರಿ 11ರಂದು ಹಾಸನದ 4ನೇ JMFC ಕೋರ್ಟ್ ಇದೀಗ ತೀರ್ಪು ಹೊರಡಿಸಿದೆ. ದಾವೆ ಇತ್ಯರ್ಥ ತನಕ ಆದೇಶ ಜಾರಿ ಅಥವಾ ಅನುಷ್ಠಾನಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ. ಜಾಗ ಪರಭಾರೆ ಮೂಲ ಸ್ವರೂಪ ಬದಲಾವಣೆ ಮಾಡದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಕೋರ್ಟ್ ಮುಂದೂಡಿತು.








