ಹಾಸನ : ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನಕ್ಕೆ ಕಳೆದ ಒಂದು ವಾರದಲ್ಲಿ 13 ಲಕ್ಷಕ್ಕೂ ಹೆಚ್ಚು ಜನರು ದೇವಿಯ ದರ್ಶನ ಪಡೆದಿದ್ದಾರೆ.ಆದರೆ ನಿನ್ನೆ ಶುಕ್ರವಾರ ಒಂದೇ ದಿನ 3.10ಲಕ್ಷ ಜನರು ದರ್ಶನ ಪಡೆದಿದ್ದಾರೆ. ದೇವಿಯ ದರ್ಶನ ಪಡೆಯುವ ಮೂಲಕ ಹಾಸನಾಂಬೆ ಹೊಸ ದಾಖಲೆ ಬರೆದಿದ್ದಾಳೆ.
ಇಷ್ಟು ಭಕ್ತರು ಒಂದೇ ದಿನ ಯಾವುದೇ ಗೋವಾದಲ್ಲಿಯೂ ಕೂಡ ದರ್ಶನ ಮಾಡಿಲ್ಲ ಹಾಸನಾಂಬೆದಿ ಅವರದೆಯಲ್ಲಿ ಈ ವರ್ಷ ಇತಿಹಾಸ ನಿರ್ಮಾಣ ಆದಂತಾಗಿದೆ ಭಕ್ತರು ದರ್ಶನಕ್ಕಾಗಿ ನೀಡಲು ಮಾನಸಿಕವಾಗಿ ರೆಡಿಯಾಗಿ ಬಿಡಬೇಕು ಭಕ್ತರು ಹೆಚ್ಚು ಬರುತ್ತಿರುವುದರಿಂದ ಸಮಯ ಕೂಡ ಹೆಚ್ಚಾಗುತ್ತದೆ ಎಂದು ನಾಳೆ ಭಕ್ತರ ಸಂಖ್ಯೆ ನಿನಗಿಂತ ಜಾಸ್ತಿ ಕೂಡ ಆಗಬಹುದು ಗಣ್ಯರ ಹೆಸರಿನಲ್ಲಿ ಶಿಫಾರಸು ಪತ್ರ ಹಿಡಿದು ಬಂದರೆ ಅವಕಾಶ ಇಲ್ಲ ಗಣ್ಯರು ಬಂದರೆ ಮಾತ್ರ ಅವರೊಂದಿಗೆ ನವರನ್ನು ಕಳುಹಿಸುತ್ತೇವೆ. ನಿಕದಿತ್ಯ ಸಮಯದಲ್ಲಿ ಹಾಸನಾಂಬೆಯ ದರ್ಶನಕ್ಕೆ ಕಳುಹಿಸುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಹೌದು ಗುರುವಾರ ಒಂದೇ ದಿನ 2.58 ಲಕ್ಷ ಭಕ್ತರು ತಾಯಿಯ ದರ್ಶನ ಪಡೆದರೆ, ಶುಕ್ರವಾರ ಈ ಸಂಖ್ಯೆ 3 ಲಕ್ಷ ದಾಟಿದೆ. ಬೆಳಗ್ಗೆಯಿಂದಲೇ ಕಿಲೋ ಮೀಟರ್ ಗಟ್ಟಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದಾರೆ. 1000 ಮುಖಬೆಲೆಯ ಟಿಕೆಟ್ ಖರೀದಿಸಿರುವವರ ಸಂಖ್ಯೆ 30 ಸಾವಿರಕ್ಕೂ ಹೆಚ್ಚಾಗಿದ್ದು, 300 ರೂ. ಟಿಕೆಟ್ ಬರೋಬ್ಬರಿ 70 ಸಾವಿರ ಮಾರಾಟವಾಗಿದೆ.
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಅಂತೆಯೇ ಅಕ್ಟೋಬರ್ 10 ರಿಂದ 16 ರವರೆಗೆ 13.89 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ.ಇನ್ನು ಧರ್ಮದರ್ಶನದಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನಸಂದಣಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಹರಸಾಹಸ ಪಟ್ಟಿತು.
ಶುಕ್ರವಾರ 300 ಮತ್ತು 1000 ರೂ.ಗಳ ಟಿಕೆಟ್ ಮಾರಾಟದಿಂದ ಆದಾಯ ಕೂಡಾ ಹೆಚ್ಚಿದೆ. 1.97 ಲಕ್ಷ ಟಿಕೆಟ್ ಮಾರಾಟದಿಂದ ಬಂದಿದೆ. ಕಳೆದ ಬಾರಿ ಆನ್ಲೈನ್ನಲ್ಲಿ ಒಟ್ಟಾರೆ 2.5 ಸಾವಿರ ಟಿಕೆಟ್ ಮಾರಾಟವಾಗಿತ್ತು. ಈ ಬಾರಿ 48 ಸಾವಿರ ಟಿಕೆಟ್ ಖರೀದಿಸಿದ್ದಾರೆ. ನಿಜವಾಗಿಯೂ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.