ಬೆಂಗಳೂರು : ಇತ್ತೀಚಿಗೆ ಶಿಡ್ಲಘಟ್ಟ ನಗರ ಸಭೆ ಆಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಶ್ಲೀಲ ಪದಗಳಿಂದ ನಿಂದಿಸಿದ್ದು ಅಲ್ಲದೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ನಡೆದಿತ್ತು. ಅದಾದ ಬಳಿಕ ಸಿಎಂ ತವರು ಕ್ಷೇತ್ರದಲ್ಲಿ ಮಹಿಳಾ ತಹಸಿಲ್ದಾರ್ ಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿತ್ತು. ಇದೀಗ ಬೆಂಗಳೂರಿನಲ್ಲಿ ಜಿಬಿಎ ಮಹಿಳಾ ಅಧಿಕಾರಿಗೆ ಗುತ್ತಿಗೆದಾರನೊಬ್ಬ ಅವಾಚ್ಯ ಪದಗಳಿಂದ ನಿಧಿಸಿದ್ದು ಅಲ್ಲದೆ ದಬ್ಬಾಳಿಕೆ ನಡೆಸಿರುವ ಘಟನೆ ವರದಿಯಾಗಿದೆ.
ಹೌದು ಜಿಬಿಎ ಅಧಿಕಾರಿ ಮೇಲೇನೆ ಗುತ್ತಿಗೆದಾರ ದಬ್ಬಾಳಿಕೆ ನಡೆಸಿರುವ ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದೆ. ಟೆಂಡರ್ ಫೈಲ್ ಮೂವ್ ಮಾಡುವಂತೆ ಧಮ್ಕಿ ಹಾಕಿದ್ದಾನೆ. ನೆಲಮಂಗಲದ ಬಾಗಲಕುಂಟೆ ಜಿಬಿಎ ಕಚೇರಿಯಲ್ಲಿ ಈ ಒಂದು ಘಟನೆ ನಡೆದಿದೆ. ಬಾಗಲಕುಂಟೆ ಜಿಬಿಎ ಇಇ ಸಂಗೀತ ಅವರಿಗೆ ನಿಂದನೆ ಮಾಡಿದ್ದಾನೆ. ಗುತ್ತಿಗೆದಾರ ನಂದೀಶ್ ಎಂಬಾತನಿಂದ ದಬ್ಬಾಳಿಕೆ ನಡೆದಿದೆ. ದಾಖಲೆ ಪತ್ರಗಳನ್ನು ಹರಿದು ಆವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾನೆ. ಕಾಮಗಾರಿ ಕೆಲಸ ನಮಗೆ ಬರಬೇಕು ಅಂತ ಕಿರಿಕ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.








