ರಾಮನಗರ : ರಾಜ್ಯದಲ್ಲಿ ಇನ್ನು 15 ತಿಂಗಳಲ್ಲಿ ಗ್ಯಾರಂಟಿಗಳು ಸ್ಥಗಿತಗೊಳ್ಳುತ್ತವೆ. ಗೃಹಲಕ್ಷ್ಮಿಯ ಹಣ ಈಗ ಚನ್ನಪಟ್ಟಣದ ಜನರಿಗೆ ಹಂಚಿಕೆ ಮಾಡುತ್ತಿದ್ದಾರೆ. ಇವರಿಗೆ ತಿಂದು ತಿಂದು ತೇಗಿ ತೇಗಿ ಅಜೀರ್ಣ ಆಗಿದೆ. ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದ್ರು. ಈ ಸರ್ಕಾರ ತೆಗೆಯೋವರೆಗೂ ನಾನು ಮನೆಯಲ್ಲಿ ಮಲಗಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಶಪಥ ಮಾಡಿದರು.
ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ ಉಭಯ ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿವೆ. ಇಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಎನ್.ಡಿ.ಎ ಅಭ್ಯರ್ಥಿ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸಿದ್ದು ನನ್ನ ಮೊಮ್ಮಗನನ್ನು ಗೆಲ್ಲಿಸುವವರೆಗೂ ಮನೆಗೆ ಹೋಗಿ ಮಲಗಲ್ಲ ಎಂದು ಗುಡುಗಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಕೊನೆಯ ಉಸಿರು ಇರುವರೆಗೂ ಹೋರಾಟ ಮಾಡುತ್ತೇನೆ. ನನ್ನ ಮೊಮ್ಮಗನನ್ನ ಗೆಲ್ಲಿಸುವವರೆಗೂ ಮನೆಗೆ ಹೋಗಿ ಮಲಗಲ್ಲ ಗೃಹಲಕ್ಷ್ಮಿ ಹಣ ಈಗ ಚನ್ನಪಟ್ಟಣದ ಜನರಿಗೆ ಹಂಚಿಕೆ ಮಾಡುತ್ತಿದ್ದಾರೆ. ಇವರಿಗೆ ತಿಂದು ತಿಂದು ತೇಗಿ ತೇಗಿ ಅಜೀರ್ಣ ಆಗಿದೆ. ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದ್ರು. ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಚೆಕ್ಕೆರೆ ಗ್ರಾಮದಲ್ಲಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೇಳಿಕೆ ನೀಡಿದರು.
ಚಕ್ಕೆರೆ ಗ್ರಾಮಕ್ಕೆ ನಾನು ಮೊದಲ ಬಾರಿಗೆ ಬರ್ತಿದ್ದೇನೆ. ನಿಖಿಲ್ ಕುಮಾರಸ್ವಾಮಿ ಎರಡು ಬಾರಿ ಸೋತಿದ್ದಾರೆ. ನಿಖಿಲ್ ಇನ್ಮುಂದೆ ಚುನಾವಣೆಗೆ ನಿಲ್ಲೋದಿಲ್ಲ ಅಂದರು. ಅಲ್ಲಿವರೆಗೂ ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋ ಗುಟ್ಟು ಯಾರಿಗೂ ಬಿಟ್ಟಿಕೊಡಲಿಲ್ಲ? ನಿಖಿಲ್ ಚುನಾವಣೆಗೆ ನಿಲ್ಲುತ್ತಾರೆ ಅಂತ ಅವರು ಕನಸುಮನಸಿನಲ್ಲೂ ಅಂದುಕೊಂಡಿರಲಿಲ್ಲ. ಈಗಾಗಲೇ 18 ಸಭೆ ನಾನು ಮಾಡಿದ್ದೇನೆ. ನಿಖಿಲ್ ಕುಮಾರಸ್ವಾಮಿ ನೆಪದಲ್ಲಿ ನಿಮ್ಮನ್ನ ನೋಡೋ ಪುಣ್ಯ ಸಿಕ್ಕಿದೆ ಎಂದರು.